ಮುಂಬೈ: ಎಂಐ 2025ರ ಕ್ಯಾಲೆಂಡರ್ ವರ್ಷವನ್ನು ಉನ್ನತ ಮಟ್ಟದಲ್ಲಿ ಪ್ರಾರಂಭಿಸಿದೆ! ಎಂಐ ಕೇಪ್ಟೌನ್ ತಂಡ ದಕ್ಷಿಣ ಆಫ್ರಿಕಾದ ಎಸ್ಎ20 (SA 20) ಟೂರ್ನಿಯ 2025ರ ಚಾಂಪಿಯನ್ಸ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ.
ಮೊದಲ ಎರಡು ಆವೃತ್ತಿಯ ಚಾಂಪಿಯನ್ ಸನ್ರೈಸರ್ಸ್ ಈಸ್ಟರ್ನ್ಕೇಪ್ ತಂಡಕ್ಕೆ ಫೈನಲ್ ಪಂದ್ಯದಲ್ಲಿ ಸೋಲುಣಿಸುವ ಮೂಲಕ ಎಂಐ ಕೇಪ್ಟೌನ್ ತಂಡ ದ. ಆಫ್ರಿಕಾದ ಮೂರನೇ ಆವೃತ್ತಿಯ ಎಸ್ಎ20 ಲೀಗ್ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಶನಿವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ರಶೀದ್ ಖಾನ್ ಸಾರಥ್ಯದ ಎಂಐ ಕೇಪ್ಟೌನ್ 8 ವಿಕೆಟ್ಗೆ 181 ರನ್ ಪೇರಿಸಿದರೆ, ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡ 18.4 ಓವರ್ಗಳಲ್ಲಿ 105 ರನ್ಗಳಿಗೆ ಆಲೌಟ್ ಆಗಿ 76 ರನ್ಗಳಿಂದ ಶರಣಾಯಿತು. ಈ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಾನು ತಂಡವನ್ನು ಹೊಂದಿರುವ ಎಲ್ಲ ಟಿ20 ಲೀಗ್ಗಳಲ್ಲಿ ಪ್ರಶಸ್ತಿ ಜಯಿಸಿದಂತಾಗಿದೆ.
ಲೀಗ್ನಲ್ಲಿ ತಮ್ಮ ಮೊದಲ ಟ್ರೋಫಿ ಎತ್ತುವ ಮೂಲಕ, ಎಂಐ ಕೇಪ್ಟೌನ್ ತಂಡ ಆರಂಭದಿಂದ ಮುಕ್ತಾಯದವರೆಗೆ ಋತುವಿನ ಮೂಲಕ ಸಂಪೂರ್ಣ ಪ್ರಾಬಲ್ಯ ಪ್ರದರ್ಶಿಸಿತು. ಪಟ್ಟುಬಿಡದ ಸ್ಥಿರತೆಯೊಂದಿಗೆ, ಅವರು ಪಂದ್ಯದ ನಂತರ ಪಂದ್ಯವನ್ನು ಗೆದ್ದರು. ಈ ವಿಜಯೋತ್ಸವದೊಂದಿಗೆ ಮುಂಬೈ. ನ್ಯೂಯಾರ್ಕ್. ಎಮಿರೇಟ್ಸ್. ಕೇಪ್ ಟೌನ್. ಎಂಐ ಕುಟುಂಬದ ಪ್ರತಿಯೊಂದು ತಂಡವು ಈಗ ತನ್ನ ಕ್ಯಾಬಿನೆಟ್ನಲ್ಲಿ ವಿಜೇತರ ಟ್ರೋಫಿಯನ್ನು ಹೊಂದಿದೆ.
ಜಾಗತಿಕ ಪಾರಮ್ಯ
ಈ ಐತಿಹಾಸಿಕ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಜಾಗತಿಕ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದನ್ನು ಮುಂದುವರೆಸಿದೆ. ಕಳೆದ 17 ವರ್ಷಗಳಲ್ಲಿ, ಮುಂಬೈ ಇಂಡಿಯನ್ಸ್ (ಐಪಿಎಲ್ ಮತ್ತು ಡಬ್ಲ್ಯುಪಿಎಲ್), ಎಂಐ ಕೇಪ್ಟೌನ್, ಎಂಐ ಎಮಿರೇಟ್ಸ್ ಮತ್ತು ಎಂಐ ನ್ಯೂಯಾರ್ಕ್ ಒಳಗೊಂಡಿರುವ 11 ಟಿ20 ಲೀಗ್ ಪ್ರಶಸ್ತಿಗಳನ್ನು ಗೆದ್ದಿದೆ.
”ನಮ್ಮ ಎಲ್ಲಾ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು – ಈ ಗೆಲುವು ನಮ್ಮದು ಅಷ್ಟೇ. 2025 ಅನ್ನು ನೆನಪಿಡುವ ವರ್ಷವನ್ನಾಗಿ ಮಾಡಿದ್ದಕ್ಕಾಗಿ ಎಂಐ ಕೇಪ್ಟೌನ್ಗೆ ಅಭಿನಂದನೆಗಳು,” ಎಂದು ಶ್ರೀಮತಿ ನೀತಾ ಎಂ. ಅಂಬಾನಿ ಹೇಳಿದರು.
“ಈ ಗೆಲುವು ನಮ್ಮ ಅಭಿಮಾನಿಗಳಿಗೆ ಅರ್ಪಣೆ. ಅವರು ನಮಗೆ ಎಲ್ಲ ಏಳುಬೀಳುಗಳಲ್ಲಿ ಬೆಂಬಲವಾಗಿ ನಿಂತವರು,” ಎಂದು ಶ್ರೀ. ಆಕಾಶ್ ಎಂ. ಅಂಬಾನಿ ಅವರು ಹೇಳಿದರು.