ಶಿವಪುರಿ: ತರಬೇತಿ ಹಾರಾಟದಲ್ಲಿದ್ದ ಐಎಎಪ್ ವಿಮಾನ ಪತನವಾಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಶಿವಪುರಿ ಹತ್ತಿರ ಗುರುವಾರ ಈ ಘಟನೆ ನಡೆದಿದೆ. ತರಬೇತಿ ಹಾರಾಟದಲ್ಲಿದ್ದಾಗ ಐಎಎಫ್ ವಿಮಾನ ಮತನವಾಗಿದೆ. ಆದರೆ, ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಪೈಲಟ್‌ಗಳು ಸುರಕ್ಷಿತವಾಗಿ ಹೊರಗೆ ಜಿಗಿದಿದ್ದಾರೆ. ಸುನಾರಿ ಚೌಕಿ ಬಳಿ ಈ ಅಪಘಾತ ಸಂಭವಿಸಿದೆ.
ಅಪಘಾತಕ್ಕೆ ನಿಜವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ವಿಚಾರಣೆಗೆ ಆದೇಶಿಸಲಾಗಿದೆ. ಯುದ್ಧ ವಿಮಾನ ಪತನವಾದ ಸ್ಥಳದಲ್ಲಿ ಚಿತ್ರೀಕರಿಸಲಾದ ದೃಶ್ಯಗಳು ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ.