ತಿರುವನಂತಪುರಂ: ಕೇರಳದಲ್ಲಿ(kerala) ಸಂಚಲನ ಮೂಡಿಸಿದ್ದ ವಿದ್ಯಾರ್ಥಿಯೊಬ್ಬನ ಕೊಲೆ ಪ್ರಕರಣದಲ್ಲಿ ವಿಷ ನೀಡಿ ಕೊಲೆ ಮಾಡಿದ್ದ ಯುವತಿಗೆ ಕೇರಳ ಕೋರ್ಟ್(court) ಮರಣದಂಡನೆ(death sentence) ವಿಧಿಸಿದೆ. ಅಲ್ಲಿನ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು (District Sessions Court) 2022 ರಲ್ಲಿ 23 ವರ್ಷದ ಶರೋನ್ ರಾಜ್ ಕೊಲೆ ಪ್ರಕರಣದಲ್ಲಿ(murder case) ಆರೋಪಿ ಗ್ರೀಷ್ಮಾಗೆ ಶಿಕ್ಷೆ ವಿಧಿಸಿದೆ .
ಶುಕ್ರವಾರ (ಜನವರಿ 17) ಗ್ರೀಷ್ಮಾ ಕೊಲೆ ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯವು ಶಿಕ್ಷೆಯನ್ನು ಜನವರಿ 20ಕ್ಕೆ ಪ್ರಕಟಿಸಿತು. ಕೊಲೆಗೆ ನೆರವು ನೀಡಿದ ಹಾಗೂ ಸಾಕ್ಷ್ಯ ನಾಶ ಮಾಡಿದ ಆಕೆಯ ಚಿಕ್ಕಪ್ಪನಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ, ಅವರ ತಾಯಿ ಸಿಂಧು ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಈ ಆದೇಶ ಹೊರಡಿಸಿದೆ. ಇದು ಅಪರೂಪದ ಪ್ರಕರಣಗಳಲ್ಲಿ ಒಂದಾಗಿದ್ದು. ಆಕೆಯ ಅವಳ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಪರಿಗಣಿಸಿ ಮರಣದಂಡನೆ ವಿಧಿಸಿತು.
ಯುವತಿ ಪರ ವಕೀಲರು ಆಕೆಯ ಶೈಕ್ಷಣಿಕ ದಾಖಲೆಯನ್ನು ಪರಿಗಣಿಸಿ ಕಡಿಮೆ ಶಿಕ್ಷೆ ವಿಧಿಸುವಂತೆ ಹಾಗೂ ಸುಧಾರಣೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಅಲ್ಲದೆ ಆಕೆ ಈಗಾಗಲೇ ಸುಧಾರಣೆ ಲಕ್ಷಣ ತೋರಿದ್ದಾಳೆ. ಆದ್ದರಿಂದ ಆಕೆಗೆ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
ನ್ಯಾಯಾಲಯದ ಪ್ರಕಾರ, ಅವಳು ತನ್ನನ್ನು ಪ್ರೀತಿಸಿದ ವ್ಯಕ್ತಿಗೆ ಮೋಸ ಮಾಡಿದ್ದಾಳೆ. ಅದು ಸಮಾಜಕ್ಕೆ ಉತ್ತಮ ಸಂದೇಶ ಕಳುಹಿಸುವುದಿಲ್ಲಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ತನಿಖಾ ತಂಡದ ಕಾರ್ಯಕ್ಷಮತೆಯನ್ನು ಶ್ಲಾಘಿಸಿತು.