ನವದೆಹಲಿ : ನವದೆಹಲಿಯ ಇಂದಿರಾ ಗಾಂಧಿ(Indira Gandhi) ಒಳಾಂಗಣ ಕ್ರೀಡಾಂಗಣದಲ್ಲಿ ಜನವರಿ 13 ರಿಂದ 19 ರ ವರೆಗೆ ನಡೆಯಲಿರುವ ಮೊದಲ ಆವೃತ್ತಿಯ 2025 ರ ಖೋಖೋ ವಿಶ್ವಕಪ್ ಗಾಗಿ ಭಾರತ ತಂಡ ಪ್ರಕಟಿಸಲಾಗಿದೆ.
ಭಾರತ ಖೋ ಖೋ ಫೆಡರೇಶನ್ (ಕೆಕೆಎಫ್‌ಐ) ಮತ್ತು ಅಂತಾರಾಷ್ಟ್ರೀಯ ಖೋ ಖೋ ಫೆಡರೇಶನ್ (ಐಕೆಕೆಎಫ್) ಗುರುವಾರ ಟೀಮ್ ಇಂಡಿಯಾದ ಪುರುಷ ಹಾಗೂ ಮಹಿಳಾ ತಂಡ ಪ್ರಕಟಿಸಿದೆ. ಈ ಮೆಗಾ ಈವೆಂಟ್‌ನ ಮೊದಲ ಆವೃತ್ತಿಯಲ್ಲಿ 20 ಪುರುಷರ ತಂಡಗಳು ಮತ್ತು 19 ಮಹಿಳಾ ತಂಡಗಳು ಭಾಗವಹಿಸಲಿದ್ದು, 23 ದೇಶಗಳು ಈ ವಿಶ್ವಕಪ್ ನಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಲಿವೆ.
ಟೀಮ್ ಇಂಡಿಯಾ ಪುರುಷರ ತಂಡವನ್ನು ಪ್ರತೀಕ್ ವೈಕರ್ (Prateek Waikar) ಮುನ್ನಡೆಸಲಿದ್ದಾರೆ. 2016 ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ ಏಕಲವ್ಯ ಪ್ರಶಸ್ತಿ ವಿಜೇತ, ತನ್ನ ಮನೆಯ ಅಕ್ಕಪಕ್ಕದಲ್ಲಿ ಇದ್ದ ಹುಡುಗರಿಂದ ಪ್ರೇರಿತರಾಗಿ ಎಂಟನೇ ವಯಸ್ಸಿನಲ್ಲಿ ಖೋಖೋ(kho kho) ಆಡಲು ಪ್ರಾರಂಭಿಸಿದರು. ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಸ್‌ನಲ್ಲಿ ಪದವಿಗಳನ್ನು ಪಡೆದಿದ್ದರೂ, ವೃತ್ತಿಪರವಾಗಿ ಖೋಖೋ ಆಟವನ್ನು ಮುಂದುವರಿಸಿ, ಕ್ರೀಡಾ ಕೋಟಾದ ಮೂಲಕ ಉದ್ಯೋಗವನ್ನು ಪಡೆದರು. ಅವರು ಅಲ್ಟಿಮೇಟ್ ಖೋ ಖೋ ಲೀಗ್‌ನಲ್ಲಿ ತೆಲುಗು ಯೋಧಾಸ್ ತಂಡವನ್ನು ರನ್ನರ್-ಅಪ್ ಸ್ಥಾನಕ್ಕೆ ಮುನ್ನಡೆಸಿದ್ದರು ಮತ್ತು 56 ನೇ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಮಹಾರಾಷ್ಟ್ರ ಚಿನ್ನದ ಪದಕ ಗೆಲ್ಲಲು ಕಾರಣರಾಗಿದ್ದರು.
ಐದು ದಶಕಗಳ ಕಾಲ ಕ್ರೀಡೆಯಲ್ಲಿ ಕಂಡ ಅನುಭವವನ್ನು ಅಶ್ವನಿ ಕುಮಾರ್ ಶರ್ಮ(Ashwani Kumar Sharma) ಪುರುಷರ ತಂಡಕ್ಕೆ ನೀಡಲಿದ್ದಾರೆ. ಅವರ ಟ್ರ್ಯಾಕ್ ರೆಕಾರ್ಡ್ ನಲ್ಲಿ 2019ರ ಸೌತ್ ಏಷ್ಸನ್ ಗೇಮ್ಸ್‌ನಲ್ಲಿ ಪುರುಷರ ತಂಡವನ್ನು ಚಿನ್ನದ ಪದಕಕ್ಕೆ(Gold medal) ಮುನ್ನಡೆಸಿದ್ದ ದಾಖಲೆಯೂ ಇದೆ. ಅದರೊಂದಿಗೆ ಅವರ ಕೋಚಿಂಗ್‌ನಲ್ಲಿಯೇ ಒಡಿಶಾ ಜಗ್ಗರ್‌ನಾಟ್ಸ್ ಮೊದಲ ಆವೃತ್ತಿಯ ಅಲ್ಟಿಮೇಟ್ ಖೋಖೋ ಲೀಗ್‌ನಲ್ಲಿ ಚಾಂಪಿಯನ್ ಆಗಿತ್ತು. 2014ರಲ್ಲಿಯೇ ಇವರಿಗೆ ದೆಹಲಿಯ ಬೆಸ್ಟ್ ಕೋಚ್ ಎನ್ನುವ ಮನ್ನಣೆ ಕೂಡ ದೊರೆತಿತ್ತು. ಅದ್ಭುತ ಟ್ರ್ಯಾಕ್ ರೆಕಾರ್ಡ್ ಹಾಗೂ ಯಶಸ್ಸಿನ ಸವಿ ಕಂಡಿರುವ ವಿಶ್ವಾಸ ಹೊಂದಿರುವ ಇವರು, ತಂಡದ ಅಮೂಲ್ಯ ಆಸ್ತಿ ಎನಿಸಿದ್ದಾರೆ.
“ಇದು ನನಗೆ ಕನಸು ನನಸಾದ ಕ್ಷಣ. ಅಧಿಕಾರಿಗಳು ಘೋಷಣೆ ಮಾಡುವಾಗ, ನನಗೆ ರೋಮಾಂಚನವಾಯಿತು. ಬಹಳ ಸಮಯದಿಂದ ಖೋ ಖೋ ಆಡಿದ್ದರಿಂದ, ಭಾರತೀಯ ತಂಡದ ನಾಯಕನಾಗಿ ನನ್ನ ಹೆಸರನ್ನು ಘೋಷಿಸುವುದನ್ನು ಕೇಳಲು ನಾನು ಉತ್ಸುಕನಾಗಿದ್ದೆ. ಇದೇ ನನ್ನ ದೊಡ್ಡ ಸಾಧನೆ. ಏಕೆಂದರೆ ತವರಿನಲ್ಲಿ ನಡೆಯುತ್ತಿರುವ ಮೊದಲ ಖೋ ಖೋ ವಿಶ್ವಕಪ್‌ನಲ್ಲಿ ನಮ್ಮ ದೇಶವನ್ನು ಮುನ್ನಡೆಸಲಿರುವುದು ನನ್ನ ವೃತ್ತಿಜೀವನದ ದೊಡ್ಡ ಸಾಧನೆಯಾಗಿದೆ,” ಎಂದು ನಾಯಕನಾಗಿ ಘೋಷಣೆ ಆದ ಬಳಿಕ ಪ್ರತೀಕ್ ವೈಕರ್ (Prateek Waikar) ಹೇಳಿದ್ದಾರೆ.
ಮಹಿಳಾ ತಂಡಕ್ಕೆ ಪ್ರಿಯಾಂಕಾ ಇಂಗ್ಲೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. 15 ವರ್ಷಗಳಲ್ಲಿ 23 ರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸಿರುವ ಅವರು ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸಾಧನೆಗಳಲ್ಲಿ ಐಎಲ್‌ಎ ಅಲಾರ್ಡ್ (ಅತ್ಯುತ್ತಮ ಸಬ್-ಜೂನಿಯರ್ ಆಟಗಾರ್ತಿ), ರಾಣಿ ಲಕ್ಷ್ಮಿ ಬಾಯಿ ಪ್ರಶಸ್ತಿ (2022 ಸೀನಿಯರ್ ನ್ಯಾಷನಲ್ಸ್), ಮತ್ತು 2022-23 ರ 4 ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಸೇರಿವೆ. ಎಂಕಾಂ ಪದವೀಧರೆಯಾಗಿರುವ ಈ ಆಲ್ರೌಂಡರ್, ಪ್ರತಿದಿನದ ಕಠಿಣ ತರಬೇತಿಯೊಂದಿಗೆ ಮುಂಬೈನ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ತಂಡಕ್ಕೆ ಸುಮಿತ್ ಭಾಟಿಯಾ ಅವರು ತರಬೇತಿ ನೀಡಲಿದ್ದಾರೆ. ಶ್ರೇಷ್ಠ ಖೋಖೋ(kho kho) ಕೋಚ್ ಆಗಿರುವ ಸುಮಿತ್ ಭಾಟಿಯಾ, ಹಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಹಲವು ಪದಕಗಳನ್ನು ಒಳಗೊಂಡಂತೆ ರಾಷ್ಟ್ರೀಯ ಸಾಧನೆಗಳನ್ನು ಮಾಡಿದ್ದಾರೆ. 4 ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್ 2023 ರಲ್ಲಿ ಮಹಿಳಾ ತಂಡದ ಮುಖ್ಯ ತರಬೇತುದಾರರಾಗಿ, ಅವರು 3 ನೇ ಏಷ್ಯನ್ ಚಾಂಪಿಯನ್‌ಶಿಪ್ ಮತ್ತು 12 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಒಳಗೊಂಡಂತೆ ಅಂತರರಾಷ್ಟ್ರೀಯ ಗೆಲುವನ್ನು ದಾಖಲಿಸಿದ್ದಾರೆ.ಅದರೊಂದಿಗೆ ಜಾಗತಿಕ ಈವೆಂಟ್‌ಗಳಲ್ಲಿ ಅಂತರರಾಷ್ಟ್ರೀಯ ರೆಫರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
“ಇದು ಮೊದಲ ವಿಶ್ವಕಪ್ ಆಗಿರುವುದರಿಂದ ಮತ್ತು ನಾನು ಭಾರತೀಯ ಮಹಿಳಾ ತಂಡದ ನಾಯಕಿಯಾಗಿ ಆಯ್ಕೆಯಾಗಿರುವುದರಿಂದ, ನನಗೆ ತುಂಬಾ ಸಂತೋಷವಾಗುತ್ತಿದೆ. ಎಲ್ಲರೂ ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ, ಈ ಜವಾಬ್ದಾರಿ ನನ್ನ ಮೇಲಿದೆ. ನಾನು ಅವರ ನಂಬಿಕೆಯನ್ನು ನನ್ನ ಅತ್ಯುತ್ತಮ ಪ್ರದರ್ಶನ ನೀಡಿ ಪೂರೈಸುತ್ತೇನೆ ಮತ್ತು ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಡುತ್ತೇನೆ” ಎಂದು ಮಹಿಳಾ ತಂಡದ ನಾಯಕಿ ಪ್ರಿಯಾಂಕಾ ಇಂಗ್ಲೆ (Priyanka Ingle) ವಿಶ್ವಾಸದಿಂದ ಹೇಳಿದ್ದಾರೆ.
ತಂಡವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟ ಮಾಡಿದ ಬಳಿಕ ಮಾತನಾಡಿದ ಕೆಕೆಎಫ್‌ಐ(KKFI) ಅಧ್ಯಕ್ಷ ಸುಧಾಂಶು ಮಿತ್ತಲ್,(Sudhanshu Mittal) “ನಮ್ಮ ರಾಷ್ಟ್ರೀಯ ತಂಡಗಳ ಆಯ್ಕೆ ಖೋ ಖೋಗೆ ಒಂದು ಐತಿಹಾಸಿಕ ಕ್ಷಣವಾಗಿದೆ, ನಾವು ಮೊದಲ ವಿಶ್ವಕಪ್ ಅನ್ನು ಆಯೋಜಿಸಲು ಸಿದ್ದತೆ ನಡೆಸಿದ್ದೇವೆ. 23 ದೇಶಗಳು ಭಾಗವಹಿಸುತ್ತಿರುವ ಈ ಟೂರ್ನಿಯು ಜಾಗತಿಕ ವೇದಿಕೆಯಲ್ಲಿ ಭಾರತದ ಕ್ರೀಡಾ ಪರಂಪರೆಯನ್ನು ಪ್ರದರ್ಶಿಸುತ್ತದೆ.
ನಮ್ಮ ಪುರುಷ ಮತ್ತು ಮಹಿಳಾ ತಂಡಗಳು ದೇಶದ ಅತ್ಯುತ್ತಮ ಪ್ರತಿಭೆಗಳನ್ನು ಪ್ರತಿನಿಧಿಸುತ್ತವೆ, ಕಠಿಣ ಪ್ರಕ್ರಿಯೆಯ ಮೂಲಕ ಇವರನ್ನು ಆಯ್ಕೆ ಮಾಡಲಾಗಿದೆ. ಪ್ರತೀಕ್ ವೈಕರ್ ಮತ್ತು ಪ್ರಿಯಾಂಕಾ ಇಂಗಲ್ ಅವರ ನೇತೃತ್ವದಲ್ಲಿ, ನಮ್ಮ ಅನುಭವಿ ಕೋಚಿಂಗ್ ಸಿಬ್ಬಂದಿಯೊಂದಿಗೆ, ನಾವು ಅದ್ಭುತ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದೇವೆ. ಈ ವಿಶ್ವಕಪ್ ಕೇವಲ ಪಂದ್ಯಾವಳಿಯಲ್ಲ; ಇದು ಒಲಿಂಪಿಕ್ ಮಟ್ಟವನ್ನು ತಲುಪುವ ಗುರಿಯನ್ನು ಹೊಂದಿರುವ ಸಾಂಪ್ರದಾಯಿಕ…