ಚೀನಾ: ಚೀನಾ ದೇಶದಲ್ಲಿ ಮತ್ತೊಂದು ವೈರಸ್ ಬಂದಿದೆ. ಕೊರೊನಾ ವೈರಸ್ ಸಹ ಬಂದಿದ್ದು ಚೀನಾ ದೇಶದಿಂದಲೇ. ಈಗ ಅದೇ ದೇಶದಲ್ಲಿ ಮತ್ತೊಂದು ಹೊಸ ವೈರಸ್ HMPV ಭಾರತಕ್ಕೆ ಕಾಲಿಡುತ್ತಿದೆ. ಈಗಾಗಲೇ ಚೀನಾ ದೇಶದ ಪರಿಸ್ಥಿತಿ ಅಲ್ಲೋಲ ಕಲ್ಲೋಲ ಆಗಿಬಿಟ್ಟಿದೆ ಎಂಬ ಇತ್ಯಾದಿ ಸುದ್ದಿಗೆಲ್ಲಾ ಕನ್ನಡಿಗ ರಾಜು ನಾಯಕ್ ಇತಿಶ್ರೀ ಹಾಡಿದ್ದಾರೆ.
2008 ರಿಂದ ಚೀನಾ ದೇಶದಲ್ಲಿ ವಾಸವಾಗಿರುವ ಕನ್ನಡಿಗ ರಾಜು ನಾಯಕ್, ವಿಶೇಷವಾದ ವಿಡಿಯೋ ಒಂದನ್ನು ಮಾಡಿದ್ದು, ಚೀನಾ ದೇಶದ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ. ಚೀನಾ ದೇಶದಲ್ಲಿ ಯಾವುದೇ ವೈರಸ್‌ನ ಹಾವಳಿ ಇಲ್ಲ. ಚೀನಾ ದೇಶ ಎಂದಿನಂತೆ ಆರಾಮವಾಗಿದೆ. ಇಲ್ಲಿ ಜನಜೀವನ ಸಂಪೂರ್ಣವಾಗಿ ನೆಮ್ಮದಿಯಿಂದ ಉಸಿರಾಡುತ್ತಿದ್ದಾರೆ. ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್, ಕ್ವಾರೆಂಟೈನ್ ಎಂಬ ಆತಂಕವಿಲ್ಲ. ಮಾಲ್ ಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಚಿತ್ರ ಮಂದಿರಗಳು, ಹೊಟೇಲ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಇಲ್ಲಿ ಏನೋ ಆಗಿದೆ ಎಂದು ಅಲ್ಲಿನ ಮಂದಿ ಭಯಬೀಳುವ ಅಗತ್ಯವಿಲ್ಲ ಎಂದು ಕನ್ನಡಿಗ ರಾಜು ನಾಯಕ್ ವಿಡಿಯೋ ಒಂದನ್ನು ಮಾಡಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ.