ದಿವ್ಯಾಂಗರ ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಆರಂಭವಾಗಿದ್ದು, ಭಾರತೀಯ ತಂಡ ಪ್ರಕಟಿಸಲಾಗಿದೆ.
ಶ್ರೀಲಂಕಾದಲ್ಲಿ ದಿವ್ಯಾಂಗರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದ್ದು, ಜನವರಿ 12ರಿಂದ ಪಂದ್ಯಗಳು ಆರಂಭವಾಗಲಿವೆ. ಟೂರ್ನಿಗೆ 17 ಜನ ಸದಸ್ಯರ ಭಾರತ ದಿವ್ಯಾಂಗ ತಂಡ ಪ್ರಕಟಿಸಲಾಗಿದೆ.
ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿಯನ್ನು 2019 ರ ನಂತರ ಮೊದಲ ಬಾರಿಗೆ ಆಡಲಾಗುತ್ತಿದೆ. 17 ಸದಸ್ಯರ ಭಾರತ ತಂಡಕ್ಕೆ ವಿಕ್ರಾಂತ್ ರವೀಂದ್ರ ಕೇಣಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ರವೀಂದ್ರ ಗೋಪಿನಾಥ್ ಸಂತೆ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಇದು ಸಮತೋಲಿತ ತಂಡವಾಗಿದ್ದು, ಯಾವುದೇ ಎದುರಾಳಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಮುಖ್ಯ ಕೋಚ್ ರೋಹಿತ್ ಜಲಾನಿ ಹೇಳಿದ್ದಾರೆ.
ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಜ. 12 ರಂದು ಮಧ್ಯಾಹ್ನ 2ಕ್ಕೆ ಮೊದಲ ಪಂದ್ಯ ನಡೆಯಲಿದೆ. ಇದಾದ ನಂತರ ಭಾರತ ತಂಡ ಜ. 13ರಂದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ತಂಡ ಇಂಡಿಯಾ ತನ್ನ ಮೂರನೇ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದ್ದು, ಈ ಪಂದ್ಯ ಜ. 15 ರಂದು ನಡೆಯಲಿದೆ. ಭಾರತ ತಂಡ ಜನವರಿ 16ರಂದು ಮತ್ತೆ ಪಾಕಿಸ್ತಾನವನ್ನು ಎದುರಿಸಲಿದೆ. ಜನವರಿ 18 ರಂದು ಇಂಗ್ಲೆಂಡ್ ಮತ್ತು ಜನವರಿ 19 ರಂದು ಶ್ರೀಲಂಕಾ ವಿರುದ್ಧ ಆಡಲಿದೆ. ಜ. 21ರಂದು ಫೈನಲ್ ಪಂದ್ಯ ನಡೆಯಲಿದೆ.
ಭಾರತ ತಂಡದಲ್ಲಿ ವಿಕ್ರಾಂತ್ ರವೀಂದ್ರ ಕೆನ್ನಿ (ನಾಯಕ), ರವೀಂದ್ರ ಗೋಪಿನಾಥ್ ಸಂತೆ (ಉಪನಾಯಕ), ಯೋಗೇಂದರ್ ಸಿಂಗ್ (ವಿಕೆಟ್ ಕೀಪರ್), ಅಖಿಲ್ ರೆಡ್ಡಿ, ರಾಧಿಕಾ ಪ್ರಸಾದ್, ದೇವೇಂದ್ರ ಸಿಂಗ್ (ವಿಕೆಟ್ ಕೀಪರ್), ಆಕಾಶ್ ಅನಿಲ್ ಪಾಟೀಲ್, ಸನ್ನಿ ಗೋಯತ್, ಪವನ್ ಕುಮಾರ್, ಜಿತೇಂದ್ರ, ನರೇಂದ್ರ, ರಾಜೇಶ್ ನಿಖಿಲ್ ಮನ್ಹಾಸ್, ಅಮೀರ್ ಹಾಸನ್, ಮಜಿದ್ ಮಗರೆ, ಕುನಾಲ್ ದತ್ತಾತ್ರೇಯ ಫಣಸಾಯ್ ಸ್ಥಾನ ಪಡೆದಿದ್ದಾರೆ.