ಕ್ರಿಕೆಟರ್ ರಾಬಿನ್ ಉತ್ತಪ್ಪ ಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಇತ್ತೀಚೆಗಷ್ಟೇ ರಾಬಿನ್ ಉತ್ತಪ್ಪ ವಿರುದ್ಧ ವಂಚನೆಯ ಆರೋಪದ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಘೋಷಿಸಲಾಗಿತ್ತು. ಸದ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಸೆಂಚುರೀಸ್ ಲೈಫ್-ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್” ಕಂಪನಿ ನಿರ್ದೇಶಕರಾಗಿದ್ದ ರಾಬಿನ್ ಉತ್ತಪ್ಪ, ಉದ್ಯೋಗಿಗಳ ಇಪಿಎಫ್ ಹಣ ವಂಚಿಸಿದ್ದಾರೆಂಬ ಆರೋಪದಡಿ ವಾರಂಟ್ ಹೊರಡಿಸಲಾಗಿತ್ತು. ಪಿಎಫ್ ಆಯುಕ್ತರು ವಾರಂಟ್ ಹೊರಡಿಸಿದ್ದರು. ಆದರೆ, ಬಂಧನದ ವಾರಂಟ್ ಗೆ ಹೈಕೋರ್ಟ್ ತಡೆ ನೀಡಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಪಿಎಫ್ ಪ್ರಾದೇಶಿಕ ಆಯುಕ್ತ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಲಲಾಗಿದೆ