ಮುಂದಿನ ವರ್ಷದಲ್ಲಿ ನಡೆಯಲಿರುವ ಹೈಬ್ರಿಡ್ ಮಾದರಿಯ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.
ವಾಸ್ತವವಾಗಿ ಈ ಟೂರ್ನಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಟೂರ್ನಿಗೆ ಪಾಕಿಸ್ತಾನ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಭಾಗವಹಿಸುವ ಕುರಿತು ಭಾರತ ತಕರಾರು ಎತ್ತಿತ್ತು. ಆನಂತರ ಬೈಬ್ರಿಡ್ ಟೂರ್ನಿ ಆಯೋಜನೆಗೆ ಪಾಕ್ ಒಪ್ಪಿಗೆ ಸೂಚಿಸಿತ್ತು. ಈಗ ಐಸಿಸಿ ವೇಳಾಪಟ್ಟಿ ಪ್ರಕಟಿಸಿದೆ.
ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯಂತೆ, ಫೆಬ್ರವರಿ 19 ರಿಂದ ಟೂರ್ನಿ ಆರಂಭವಾಗಲಿದೆ. ಮೊದಲ ಪಂದ್ಯ ಕರಾಚಿಯಲ್ಲಿ ನ್ಯೂಜಿಲೆಂಡ್ ಮತ್ತು ಆತಿಥೇಯ ಪಾಕಿಸ್ತಾನ ಮಧ್ಯೆ ನಡೆಯಲಿದೆ. ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತ ತಂಡವು ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ಹಾಗೂ ಪಾಕಿಸ್ತಾನ್ ಮಧ್ಯೆ ದುಬೈನಲ್ಲಿ ಫೆ. 23ರಂದು ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.
ಟೂರ್ನಿಯ ಸಂಪೂರ್ಣ ವೇಳಾಪಟ್ಟಿ
ದಿನಾಂಕ ಮುಖಾಮುಖಿ ಸ್ಥಳ
19 ಫೆಬ್ರವರಿ, 2025 ಪಾಕಿಸ್ತಾನ vs ನ್ಯೂಜಿಲೆಂಡ್ ಕರಾಚಿ
20 ಫೆಬ್ರವರಿ, 2025 ಭಾರತ vs ಬಾಂಗ್ಲಾದೇಶ ದುಬೈ
21 ಫೆಬ್ರವರಿ, 2025 ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ ಕರಾಚಿ
22 ಫೆಬ್ರವರಿ, 2025 ಆಸ್ಟ್ರೇಲಿಯಾ vs ಇಂಗ್ಲೆಂಡ್ ಲಾಹೋರ್
23 ಫೆಬ್ರವರಿ, 2025 ಪಾಕಿಸ್ತಾನ vs ಭಾರತ ದುಬೈ
24 ಫೆಬ್ರವರಿ, 2025 ಬಾಂಗ್ಲಾದೇಶ vs ನ್ಯೂಜಿಲೆಂಡ್ ರಾವಲ್ಪಿಂಡಿ
25 ಫೆಬ್ರವರಿ, 2025 ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ರಾವಲ್ಪಿಂಡಿ
26 ಫೆಬ್ರವರಿ, 2025 ಅಫ್ಘಾನಿಸ್ತಾನ vs ಇಂಗ್ಲೆಂಡ್ ಲಾಹೋರ್
27 ಫೆಬ್ರವರಿ, 2025 ಪಾಕಿಸ್ತಾನ vs ಬಾಂಗ್ಲಾದೇಶ ರಾವಲ್ಪಿಂಡಿ
28 ಫೆಬ್ರವರಿ, 2025 ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ ಲಾಹೋರ್
ಮಾರ್ಚ್ 1, 2025 ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ ಕರಾಚಿ
ಮಾರ್ಚ್ 2, 2025 ನ್ಯೂಜಿಲೆಂಡ್ vs ಭಾರತ ದುಬೈ
ಮಾರ್ಚ್ 4, 2025 ಸೆಮಿಫೈನಲ್ 1 ದುಬೈ
ಮಾರ್ಚ್ 5, 2025 ಸೆಮಿಫೈನಲ್ 2 ಲಾಹೋರ್
ಮಾರ್ಚ್ 9, 2025 ಫೈನಲ್ ಲಾಹೋರ್/ದುಬೈ
ಟೂರ್ನಿಯ ಎ ಗುಂಪಿನಲ್ಲಿ ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳಿದ್ದರೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ಬಿ ಗುಂಪಿನಲ್ಲಿವೆ. ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿವೆ.