ರಾಮನಗರ: ಮಹಿಳೆಯೊಬ್ಬರು ಹಣದ ಆಸೆಗೆ ಪತಿಗೆ ಹಾಗೂ ಕುಟುಂಬಸ್ಥರಿಗೆ ಹೇಳದೆ ಒಂದು ತಿಂಗಳ ಸ್ವಂತ ಮಗುವನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ರಾಮನಗರದಲ್ಲಿ ನಡೆದಿದೆ. ಈ ಕುರಿತು ಪತಿ ರಾಮನಗರದ ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ದಾಂ ಪಾಷಾ ಎಂಬಾತ ತನ್ನ ಪತ್ನಿಯ ವಿರುದ್ಧ ದೂರು ನೀಡಿದ್ದಾರೆ. ರಾಮನಗರದ ಯಾರಬ್ ನಗರದಲ್ಲಿ ವಾಸಿಗರುವ ಸದ್ದಾಂ ಪಾಷಾ ಹಾಗೂ ನಸ್ರೀನ್ ದಂಪತಿಗೆ ಅವಳಿ ಮಕ್ಕಳು ಸೇರಿದಂತೆ ಐವರು ಮಕ್ಕಳಿದ್ದಾರೆ.
30 ದಿನಗಳ ಹಿಂದೆ ದಂಪತಿಗೆ ಗಂಡು ಮಗು ಜನಿಸಿತ್ತು. ದಂಪತಿಗಳು ಯಾರಬ್ ನಗರದಲ್ಲಿ ಫಿಲೇಚೇರ್ ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಪತಿ ಸದ್ದಾಂ ಪಾಷಾ ಹೆಚ್ಚಿನ ಸಾಲ ಮಾಡಿದ್ದ. ಹೀಗಾಗಿ ಕೊನೆಯ ಮಗುವನ್ನು ಮಾರಾಟ ಮಾಡುವಂತೆ ಪತ್ನಿಯು ಸದ್ದಾಂಗೆ ಪೀಡಿಸುತ್ತಲೇ ಬಂದಿದ್ದಳು. ಆದರೆ, ಸದ್ದಾಂ ಪತ್ನಿಯ ಮಾತನ್ನು ತಿರಸ್ಕರಿಸಿದ್ದ. ಆದರೆ, ಡಿ. 5ರಂದು ಪತಿ ಕೆಲಸಕ್ಕೆ ಹೋಗಿದ್ದನ್ನು ಬಳಸಿಕೊಂಡ ನಸ್ರೀನ್ ಸ್ಥಳೀಯ ಅಸ್ಲಾಂ ಹಾಗೂ ಫಾಹಿಮಾ ಸಹಾಯದೊಂದಿಗೆ ಬೆಂಗಳೂರಿನ ದಂಪತಿಗಳಿಗೆ ಮಗು ಮಾರಾಟ ಮಾಡಿದ್ದಾಳೆ. ಈ ವಿಷಯ ಗೊತ್ತಾಗಿ ಪತಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.