ಐಪಿಎಲ್ ನ ಪುರುಷರ ಹರಾಜು ಪ್ರಕ್ರಿಯೆ ಇತ್ತೀಚೆಗಷ್ಟೇ ಮುಗಿದಿದ್ದು, ಈಗ ವುಮೆನ್ಸ್ ಸರದಿ ಬಂದಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ ನ ಮಿನಿ ಹರಾಜು ಪ್ರಕ್ರಿಯೆಗೆ ದಿನಾಂಕ ಫಿಕ್ಸ್ ಆಗಿದೆ.
ಡಿ. 15ರಂದು WPL ಮಿನಿ ಹರಾಜು ನಡೆಯಲಿದ್ದು, ಹರಾಜಿಗಾಗಿ ಒಟ್ಟು 120 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 91 ಭಾರತೀಯರು ಹಾಗೂ 29 ವಿದೇಶಿ ಆಟಗಾರ್ತಿಯರಿದ್ದಾರೆ. ಆದರೆ, ಈ ಬಾರಿಯ ಹರಾಜಿನಲ್ಲಿ ಒಟ್ಟು 19 ಆಟಗಾರ್ತಿಯರಿಗೆ ಮಾತ್ರ ಅವಕಾಶ ಸಿಗಲಿದೆ. ಐವರು ವಿದೇಶಿ ಆಟಗಾರ್ತಿಯರ ಸ್ಲಾಟ್ಗಳು ಖಾಲಿಯಿವೆ. ಈ ಸ್ಲಾಟ್ಗಳನ್ನು ಭರ್ತಿ ಮಾಡಿಕೊಳ್ಳಲು 5 ಫ್ರಾಂಚೈಸಿಗಳು ಡಿಸೆಂಬರ್ 15 ರಂದು ಬಿಡ್ಡಿಂಗ್ ನಡೆಸಲಿವೆ.
ಖಾಲಿ ಇರುವ ಸ್ಲಾಟ್ ಗಳನ್ನು ನೋಡುವುದಾದರೆ, ಡೆಲ್ಲಿ ಕ್ಯಾಪಿಟಲ್ಸ್: 4 ಸ್ಲಾಟ್ (1 ವಿದೇಶಿ ಆಟಗಾರ್ತಿಯ ಸ್ಲಾಟ್), ಗುಜರಾತ್ ಜೈಂಟ್ಸ್: 4 ಸ್ಲಾಟ್ (2 ವಿದೇಶಿ ಆಟಗಾರ್ತಿಯ ಸ್ಲಾಟ್), ಮುಂಬಯಿ ಇಂಡಿಯನ್ಸ್: 4 ಸ್ಲಾಟ್ (1 ವಿದೇಶಿ ಆಟಗಾರ್ತಿಯ ಸ್ಲಾಟ್), ರಾಯಲ್ ಚಾಲೆಂಜರ್ಸ್ ಬೆಂಗಳೂರು: 4 ಸ್ಲಾಟ್ (ವಿದೇಶಿ ಆಟಗಾರ್ತಿಯರ ಸ್ಲಾಟ್ ಭರ್ತಿ ಆಗಿದೆ), ಯುಪಿ ವಾರಿಯರ್ಸ್: 3 ಸ್ಲಾಟ್ (1 ವಿದೇಶಿ ಆಟಗಾರ್ತಿಯ ಸ್ಲಾಟ್) ಖಾಲಿ ಇವೆ. ಹಲವಾರು ಸ್ಟಾರ್ ಆಟಗಾರರು ಕೂಡ ಈ ಬಾರಿ ಹರಾಜಿನಲ್ಲಿದ್ದಾರೆ.