ಗಯಾನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡಿದ್ದಾರೆ. ಪ್ರಜಾಪ್ರಭುತ್ವವು ನಮ್ಮ ಡಿಎನ್ ಎ ನಲ್ಲಿದೆ. ನಮಗೆ ಪ್ರಜಾಪ್ರಭುತ್ವ ಮತ್ತು ಮಾನವೀಯತೆ ನಮ್ಮ ರಕ್ತದಲ್ಲಿದೆ. ಹೀಗಾಗಿ ಭಾರತವು ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯ ಹಸ್ತ ಚಾಚುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದ್ದಾರೆ.
ಜಗತ್ತಿಗೆ ಇದು ಸಂಘರ್ಷದ ಸಮಯವಲ್ಲ. ಸಂಘರ್ಷಕ್ಕೆ ಕಾರಣವಾಗುವ ಪರಿಸ್ಥಿತಿಗಳನ್ನು ಗುರುತಿಸಲು ಮತ್ತು ತೊಡೆದುಹಾಕಲು ಇದು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದಾರೆ.
ಗಯಾನಾ ತನ್ನ ಉನ್ನತ ಗೌರವವನ್ನು ನನಗೆ ನೀಡಿದೆ. ಈ ಗೌರವಕ್ಕಾಗಿ ನಾನು ಎಲ್ಲಾ ಗಯಾನೀಸ್ ಜನರಿಗೆ ಕೃತಜ್ಞನಾಗಿದ್ದೇನೆ. ನಾನು ಅದನ್ನು ಭಾರತದ ಎಲ್ಲಾ ನಾಗರಿಕರಿಗೆ ಅರ್ಪಿಸುತ್ತೇನೆ. ಸುಮಾರು 14 ವರ್ಷಗಳ ಹಿಂದೆ ನಾನು ಕುತೂಹಲಕಾರಿ ವ್ಯಕ್ತಿಯಾಗಿ ಈ ಸುಂದರ ದೇಶಕ್ಕೆ ಬಂದಿದ್ದೆ. ಸಾಮಾನ್ಯವಾಗಿ, ಜನರು ಬೆರಗುಗೊಳಿಸುವ ಸ್ಥಳಗಳಿಗೆ ಪ್ರಯಾಣಿಸಲು ಇಷ್ಟಪಡುತ್ತಾರೆ ಎಂದಿದ್ದಾರೆ.