ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಟೆಸ್ಟ್ ಟೂರ್ನಿ ಆರಂಭವಾಗಲಿದ್ದು, ಮೊದಲ ಪಂದ್ಯವು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಪಿಚ್ ನಲ್ಲಿ ಅವಘಡವೊಂದು ನಡೆದಿದೆ.
ಮೊದಲ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಈ ವೇಳೆ ಅಂಪೈರ್ ಮುಖಕ್ಕೆ ಬಾಲ್ ಬಡಿದ ಕಾರಣ ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಪರ್ತ್‌ನಲ್ಲಿ ನಡೆದ ಮೂರನೇ ದರ್ಜೆ ಕ್ರಿಕೆಟ್ ಪಂದ್ಯದ ವೇಳೆ ಈ ಅಪಾಯಕಾರಿ ಅವಘಢ ಸಂಭವಿಸಿದೆ.
ಅಂಪೈರ್ ಟೋನಿ ಡಿ ನೊಬ್ರೆಗಾ ಅವರ ಮುಖಕ್ಕೆ ರಬಸವಾಗಿ ಬಂದ ಚೆಂಡು ಬಡಿದ ಕಾರಣ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿ ನೊಬ್ರೆಗಾ ಅವರಿಗೆ ಗಂಭೀರವಾಗಿ ಗಾಯವಾಗಿದ್ದರೂ ಅವರ ಮುಖದಲ್ಲಿ ಯಾವುದೇ ಮೂಳೆ ಮುರಿತವಾಗಿಲ್ಲ.