ಅಬುಜಾ: ಪ್ರಧಾನಿ ನರೇಂದ್ರ ಮೋದಿ ಅವರು ನೈಜೀರಿಯಾಕ್ಕೆ ತಮ್ಮ ಮೊದಲ ಭೇಟಿ ನಡೆಸಿದ್ದು, ಈ ವೇಳೆ ಅವರಿಗೆ ಭವ್ಯ ಸ್ವಾಗತ ಕೋರಲಾಗಿತ್ತು.
ನೈಜೀರಿಯಾದಲ್ಲಿನ ಭಾರತೀಯ ಸಮುದಾಯದವರು ಬಹಳ ವೈಭವ ಮತ್ತು ಸಂಭ್ರಮದಿಂದ ಸ್ವಾಗತಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನೈಜೀರಿಯಾದ ಅಧ್ಯಕ್ಷರಿಗೆ ತಮ್ಮ ಇತ್ತೀಚಿನ ಭೇಟಿ ವೇಳೆ ಬೆಳ್ಳಿಯ ಸಿಲೋಫರ್ ಪಂಚಾಮೃತ ಕಲಶವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಭಾರತದ ಶ್ರೀಮಂತ ಪರಂಪರೆ ಪ್ರತಿ ಬಿಂಬಿಸುತ್ತದೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಸಾಂಪ್ರದಾಯಿಕ ಕರಕುಶಲತೆಯ ಕಲಶವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಈ ಕಲಶವು ಉತ್ತಮ ಗುಣಮಟ್ಟದ ಬೆಳ್ಳಿಯಿಂದ ಮಾಡಲ್ಪಟ್ಟಿದೆ ಮತ್ತು ಕೊಲ್ಲಾಪುರದ ಪ್ರಸಿದ್ಧ ಲೋಹದ ಕುಸುರಿಯನ್ನು ಪ್ರದರ್ಶಿಸುವ ಸೊಗಸಾದ ಕೆತ್ತನೆಗಳನ್ನು ಹೊಂದಿದೆ.