ಐಪಿಎಲ್ ಸೀಸನ್-18ರ ಮೆಗಾ ಹರಾಜಿಗಾಗಿ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಎಲ್ಲ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಪಡೆಯಲು ಸಜ್ಜಾಗುತ್ತಿವೆ. ಹರಾಜಿನಲ್ಲಿ ಖರೀದಿಸಬೇಕಾದ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಅದರಂತೆ ಆರ್ಸಿಬಿ ಫ್ರಾಂಚೈಸಿ ರೂಪಿಸಿರುವ ಟಾರ್ಗೆಟ್ ಲಿಸ್ಟ್ನಲ್ಲಿ ಇಬ್ಬರು ಆಟಗಾರರಿದ್ದಾರೆ ಎಂಬುವುದು ಬಹಿರಂಗವಾಗಿದೆ.
ಈ ಬಾರಿ ಅಭಿಮಾನಿಗಳ ಒತ್ತಡ ಹಾಗೂ ತಂಡದ ಗೆಲುವಿಗಾಗಿ ಫ್ರಾಂಚೈಸಿಯು ಪ್ಳ್ಯಾನ್ ರೂಪಿಸಿದೆ. ಈ ಪ್ಲ್ಯಾನ್ ನಲ್ಲಿ ಕೆ.ಎಲ್. ರಾಹುಲ್ ಅವರನ್ನು ಮತ್ತೆ ತಂಡಕ್ಕೆ ಬರಮಾಡಿಕೊಳ್ಳಲು ಮುಂದಾಗಿದೆ. ದ್ವಿತೀಯ ಸುತ್ತಿನ ಹರಾಜು ಪಟ್ಟಿಯಲ್ಲಿರುವ ರಾಹುಲ್ ಅವರ ಮೂಲ ಬೆಲೆ 2 ಕೋಟಿ ರೂ. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಅವರ ಖರೀದಿಗೆ ಕನಿಷ್ಠ 10 ಕೋಟಿಯನ್ನಾದರೂ ಮೀಸಲಿಡಲಿದೆ ಎಂದು ತಿಳಿದು ಬಂದಿದೆ.
ಕೆಎಲ್ ರಾಹುಲ್ ಖರೀದಿಯಿಂದ ಆರ್ ಸಿಬಿಗೆ ವಿಕೆಟ್ ಕೀಪರ್ ಹಾಗೂ ನಾಯಕನ ಸ್ಥಾನಗಳನ್ನು ತುಂಬಿಕೊಳ್ಳಬಹುದು. ಅಲ್ಲದೆ ಕನ್ನಡಿಗನ ಖರೀದಿಯಿಂದ ತವರಿನ ಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಫ್ರಾಂಚೈಸಿ ಯಶಸ್ವಿಯಾಗಬಹುದು. ಹೀಗಾಗಿ ರಾಹುಲ್ ಮೇಲೆ ಆರ್ ಸಿಬಿ ಈ ಬಾರಿ ಕಣ್ಣಿಟ್ಟಿದೆ.
ಯುಜ್ವೇಂದ್ರ ಚಹಲ್ ಅವರ ಮೇಲೆಯೂ ಆರ್ ಸಿಬಿ ಕಣ್ಣಿಟ್ಟಿದೆ. ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ಪಿನ್ ಮೋಡಿಗಾರನ ಖರೀದಿಗೆ ಆರ್ಸಿಬಿ ಆಸಕ್ತಿ ಹೊಂದಿದೆ. ಬೆಂಗಳೂರು ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಯುಜ್ವೇಂದ್ರ ಚಹಲ್ ಹೆಸರಿನಲ್ಲಿದೆ. 2014 ರಿಂದ 2021 ರವರೆಗೆ ಆರ್ಸಿಬಿ ಪರ 113 ಪಂದ್ಯಗಳನ್ನಾಡಿರುವ ಚಹಲ್ ಒಟ್ಟು 139 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಮತ್ತೆ ತಂಡದಲ್ಲಿ ಸ್ಥಾನ ನೀಡಲು ಮುಂದಾಗಲಾಗಿದೆ.