ನಟ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸಿಂಘಂ ಅಗೇನ್’ ಸಿನಿಮಾ ಬಾಕ್ ಆಫೀಸ್ ನಲ್ಲಿ ಧೂಳೆಬ್ಬಿಸುತಿದೆ.
ಸಿನಿಮಾ ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ಸುಮಾರು 250 ಕೋಟಿ ರೂ. ಗಳಿಕೆ ಮಾಡಿದೆ. ಅಲ್ಲದೇ, ‘ಸಿಂಘಂ’ ಸಿನಿಮಾ ಸರಣಿಯ ಹಿಂದಿನ ಸಿನಿಮಾಗಳ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ನ್ನು ಕೇವಲ 5 ದಿನಗಳಲ್ಲಿ ಮುರಿದಿದೆ.
ಅಜಯ್ ದೇವಗನ್ ನಟನೆಯ ‘ಸಿಂಘಂ’ ಮೊದಲ ಬಾರಿ 2011 ರಲ್ಲಿ ಬಿಡುಗಡೆ ಆಗಿತ್ತು. ತಮಿಳಿನಲ್ಲಿ ಸೂರ್ಯ ನಟಿಸಿದ್ದ ‘ಸಿಂಘಂ’ ಸಿನಿಮಾದ ರೀಮೇಕ್ ಆಗಿತ್ತು. 2011 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. ಈ ಚಿತ್ರವು 2011ರಲ್ಲಿ 20 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಿತ್ತು. ಆಗ 160 ಕೋಟಿ ರೂ. ಗಳಿಕೆ ಮಾಡಿತ್ತು. ದಾಖಲೆಯನ್ನು ಈಗ ಬಿಡುಗಡೆ ಆಗಿರುವ ‘ಸಿಂಘಂ ಅಗೇನ್’ ಸಿನಿಮಾ ಕೇವಲ ಮೂರು ದಿನಗಳಲ್ಲಿ ಮುರಿದು ಹಾಕಿದೆ.
2014 ರಲ್ಲಿ ‘ಸಿಂಘಂ ರಿಟರ್ನ್ಸ್’ ಸಿನಿಮಾ ತಯಾರಿಸಲಾಗಿತ್ತು. ಆಗ ಬಾಕ್ಸ್ ಆಫೀಸ್ನಲ್ಲಿ 216 ಕೋಟಿ ರೂಪಾಯಿ ಹಣ ಗಳಿಸಿತು. ಈಗ ಬರೋಬ್ಬರಿ 250 ಕೋಟಿ ರೂ. ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಭಾನುವಾರದ ವೇಳೆಗೆ ಈ ಚಿತ್ರ 300 ಕೋಟಿ ರೂ. ಗಡಿ ದಾಟಬಹುದು ಎಂದು ನಿರೀಕ್ಷಿಸಲಾಗಿದೆ. ಚಿತ್ರದಲ್ಲಿ ಅಜಯ್ ದೇವಗನ್ ನಾಯಕ, ಕರೀನಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಹಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.