ಅಂಡರ್ 19 ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟವಾಗಿದೆ.
ಯುಎಇ ನಲ್ಲಿ ನ. 29ರಿಂದ ಈ ಟೂರ್ನಿ ಆರಂಭವಾಗಲಿದೆ. ಫೈನಲ್ ಪಂದ್ಯ ಡಿಸೆಂಬರ್ 8 ರಂದು ನಡೆಯಲಿದೆ. ಈ ಬಾರಿ ಟೂರ್ನಿಯಲ್ಲಿ 8 ತಂಡಗಳು ಕಪ್ ಗಾಗಿ ಸೆಣಸಾಟ ನಡೆಸಲಿವೆ. ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗ್ರೂಪ್-ಎ ನಲ್ಲಿ ಕಾಣಿಸಿಕೊಂಡಿವೆ.
ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ್ ತಂಡಗಳು ಸೆಣಸಾಟ ನಡೆಸಲಿವೆ. ಭಾರತ ತಂಡದ ಅಭಿಯಾನ ನ. 30ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಭಾರತ ಬದ್ಧ ವೈರಿಯೊಂದಿಗೆ ಸೆಣಸಾಟ ನಡೆಸಲಿದೆ.
ಗುಂಪು ಎ ನಲ್ಲಿ ಭಾರತ, ಪಾಕಿಸ್ತಾನ್, ಯುಎಇ, ಜಪಾನ್ ತಂಡಗಳು ಸ್ಥಾನ ಪಡೆದಿವೆ. ಗುಂಪು ಬಿನಲ್ಲಿ ನೇಪಾಳ, ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್ ತಂಡಗಳು ಸ್ಥಾನ ಪಡೆದಿವೆ.
U19 ಏಷ್ಯಾಕಪ್ 2024 ವೇಳಾಪಟ್ಟಿ:
ದಿನಾಂಕ ತಂಡಗಳು ಸ್ಥಳ
ಶುಕ್ರವಾರ, ನವೆಂಬರ್ 29 ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ ದುಬೈ
ಶುಕ್ರವಾರ, ನವೆಂಬರ್ 29 ಶ್ರೀಲಂಕಾ vs ನೇಪಾಳ ಶಾರ್ಜಾ
ಶನಿವಾರ, ನವೆಂಬರ್ 30 ಭಾರತ vs ಪಾಕಿಸ್ತಾನ್ ದುಬೈ
ಶನಿವಾರ, ನವೆಂಬರ್ 30 ಯುಎಇ vs ಜಪಾನ್ ಶಾರ್ಜಾ
ಭಾನುವಾರ, ಡಿಸೆಂಬರ್ 1 ಬಾಂಗ್ಲಾದೇಶ್ vs ನೇಪಾಳ ದುಬೈ
ಭಾನುವಾರ, ಡಿಸೆಂಬರ್ 1 ಶ್ರೀಲಂಕಾ vs ಅಫ್ಘಾನಿಸ್ತಾನ್ ಶಾರ್ಜಾ
ಸೋಮವಾರ, ಡಿಸೆಂಬರ್ 2 ಪಾಕಿಸ್ತಾನ್ vs ಯುಎಇ ದುಬೈ
ಸೋಮವಾರ, ಡಿಸೆಂಬರ್ 2 ಭಾರತ vs ಜಪಾನ್ ಶಾರ್ಜಾ
ಮಂಗಳವಾರ, ಡಿಸೆಂಬರ್ 3 ಬಾಂಗ್ಲಾದೇಶ್ vs ಶ್ರೀಲಂಕಾ ದುಬೈ
ಮಂಗಳವಾರ, ಡಿಸೆಂಬರ್ 3 ಅಫ್ಘಾನಿಸ್ತಾನ್ vs ನೇಪಾಳ ಶಾರ್ಜಾ
ಬುಧವಾರ, ಡಿಸೆಂಬರ್ 4 ಪಾಕಿಸ್ತಾನ್ vs ಜಪಾನ್ ದುಬೈ
ಬುಧವಾರ, ಡಿಸೆಂಬರ್ 4 ಭಾರತ vs ಯುಎಇ ಶಾರ್ಜಾ
ಶುಕ್ರವಾರ, ಡಿಸೆಂಬರ್ 6 ಸೆಮಿಫೈನಲ್ 1 ದುಬೈ
ಶುಕ್ರವಾರ, ಡಿಸೆಂಬರ್ 6 ಸೆಮಿಫೈನಲ್ 2 ಶಾರ್ಜಾ
ಭಾನುವಾರ, ಡಿಸೆಂಬರ್ 8 ಫೈನಲ್ ದುಬೈ ನಲ್ಲಿ ನಡೆಯಲಿದೆ.