ನವದೆಹಲಿ: ದಕ್ಷಿಣ ಕೊರಿಯಾದ ಸಾಹಿತಿ ಹಾನ್ ಕಾಂಗ್ ಗೆ ನೊಬೆಲ್ ಪ್ರಶಸ್ತಿ ಒಲಿದು ಬಂದಿದೆ. ಈ ಸಾಹಿತಿ ಸಾಹಿತ್ಯಿಕ ಹಿನ್ನೆಲೆ ಇರುವ ಕುಟುಂಬದಿಂದಲೇ ಬಂದವರು. ಈ ಮೂಲಕ ನೊಬೆಲ್ ಪ್ರಶಸ್ತಿ ಪಡೆದ ಕೊರಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಲ್ಲದೇ, ನೊಬೆಲ್ ಪ್ರಶಸ್ತಿ ಪಡೆದ 18ನೇ ಮಹಿಳೆಯಾಗಿದ್ದಾರೆ. 2016ರಲ್ಲಿ ಅವರು ತಮ್ಮ ಕಾದಂಬರಿ ದಿ ವೆಜಿಟೇರಿಯನ್‌ಗಾಗಿ ಮ್ಯಾನ್ ಬೂಕರ್ ಅಂತರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು. ಆ ಪ್ರಶಸ್ತಿಯನ್ನು ಗೆದ್ದ ಮೊದಲ ಕೊರಿಯನ್ ಎಂಬ ಹೆಗ್ಗಳಿಕೆ ಕೂಡ ಇವರದ್ದಾಗಿತ್ತು.
1970ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್ಜುದಲ್ಲಿ ಜನಿಸಿದ ಹಾನ್ ಕಾಂಗ್ ಅವರ ತಂದೆ ಹೆಸರಾಂತ ಕಾದಂಬರಿಕಾರರು. ಹಾನ್ ಕಾಂಗ್ 1993ರಲ್ಲಿ ಮುನ್ಹಕ್-ಗ್ವಾ-ಸಾಹೋ (ಸಾಹಿತ್ಯ ಮತ್ತು ಸಮಾಜ) ಚಳಿಗಾಲದ ಸಂಚಿಕೆಯಲ್ಲಿ “ವಿಂಟರ್ ಇನ್ ಸಿಯೋಲ್” ಸೇರಿದಂತೆ ಐದು ಕವನಗಳನ್ನು ಪ್ರಕಟಿಸುವ ಮೂಲಕ ಕವಯಿತ್ರಿಯಾಗಿ ಸಾಹಿತ್ಯ ಲೋಕ ಪ್ರವೇಶಿಸಿದ್ದರು. ಆನಂತರ ಕಾದಂಬರಿಯಲ್ಲಿ ಆಸಕ್ತಿ ತೋರಿಸಿದರು.
ಇತ್ತೀಚಿನ ಕಾದಂಬರಿ ‘ಐ ಡೋ ನಾಟ್ ಬಿಡ್ ಫೇರ್‌ವೆಲ್’ಗೆ 2023ರಲ್ಲಿ ಫ್ರಾನ್ಸ್‌ನಲ್ಲಿ ಮೆಡಿಸಿಸ್ ಪ್ರಶಸ್ತಿ ಮತ್ತು 2024ರಲ್ಲಿ ಎಮಿಲ್ ಗೈಮೆಟ್ ಪ್ರಶಸ್ತಿ ಲಭಿಸಿದೆ. ಹಾನ್ ಕಾಂಗ್ 2016ರಲ್ಲಿ ‘ದಿ ವೆಜಿಟೇರಿಯನ್’ಗಾಗಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದಿದ್ದಾರೆ.