ಲಕ್ನೋ: 17 ವರ್ಷದ ಅಪ್ರಾಪ್ತನೊಂದಿಗೆ 30 ವರ್ಷದ ಆಂಟಿ ಏಕಾಂತದಲ್ಲಿರುವುದನ್ನು ಕಂಡ ಬಾಲಕಿಯನ್ನೇ ಪಾಪಿಗಳು ಕೊಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಸಿಕಂದ್ರಾ ರಾವ್ ಪೊಲೀಸ್ ಠಾಣೆ (Sikandra Rau Police Station) ವ್ಯಾಪ್ತಿಯಲ್ಲಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಉರ್ವಿ (6) ಕೊಲೆಯಾಗಿರುವ ಬಾಲಕಿ. ಏಕಾಂತ ಕಂಡ ಬಾಲಕಿಯ ಕತ್ತು ಹಿಸುಕಿದ ಪಾಪಿಗಳು, ಗೋಣಿ ಚೀಲದಲ್ಲಿ ಮೃತದೇಹ ತುಂಬಿಸಿ ಬಾವಿಗೆ ಎಸೆದಿದ್ದಾರೆ. ಬಾವಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾದ ನಂತರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
30ರ ಮಹಿಳೆ ಕಳೆದ ಮೂರು ತಿಂಗಳಿನಿಂದ 17 ವರ್ಷದ ಬಾಲಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಇದನ್ನು ಬಾಲಕಿ ಕಂಡು ತಂದೆಗೆ ಹೇಳುವುದಾಗಿ ಹೇಳಿದೆ. ಆಗ ಬಾಲಕಿಯನ್ನು ಬೆದರಿಸಿದರೂ ಹೇಳುತ್ತೇನೆ ಎಂದು ಹೇಳಿದ್ದಾಳೆ. ಹೀಗಾಗಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.