70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು. ಕನ್ನಡದ ಚಿತ್ರಗಳೇ ಪ್ರಶಸ್ತಿ ಸುತ್ತಿನಲ್ಲಿ ಅಬ್ಬರಿಸಿದ್ದು, ವಿಶೇಷವಾಗಿತ್ತು.
‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ನಿರ್ಮಾಣ ಮಾಡಿದ ಸಿನಿಮಾಗಳಿಗೆ ಬರೋಬ್ಬರಿ 4 ಪ್ರಶಸ್ತಿಗಳು ಸಿಕ್ಕಿರುವುದು ಸಂಸ್ಥೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಕೆಜಿಎಫ್ 2, ಕಾಂತಾರ ಸೇರಿದಂತೆ ನಾಲ್ಕು ಪ್ರಶಸ್ತಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅವರು, ಕೆಜಿಎಫ್ 3’ ಕುರಿತು ಕೂಡ ಅಪ್ಡೇಟ್ ನೀಡಿದ್ದಾರೆ. ಕೆಜಿಎಫ್ 2 ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಪ್ರಶಸ್ತಿ ಬಂದಿರುವುದಕ್ಕೆ ತುಂಬ ಸಂತಸ ಆಗುತ್ತಿದೆ. ಅದೇ ಸಿನಿಮಾಗೆ ಕೆಲಸ ಮಾಡಿದ ಸಾಹಸ ನಿರ್ದೇಶಕರಿಗೂ ಪ್ರಶಸ್ತಿ ಬಂದಿದೆ. ‘ಕಾಂತಾರ’ ಅತ್ಯುತ್ತಮ ಮನರಂಜನಾ ಸಿನಿಮಾವಾಗಿ ಪ್ರಶಸ್ತಿ ಪಡೆದಿದೆ. ಆ ಸಿನಿಮಾದಲ್ಲಿ ನಟಿಸಿದ್ದಕ್ಕೆ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಒಂದೇ ವರ್ಷದಲ್ಲಿ ನಮ್ಮ ಎರಡು ಸಿನಿಮಾಗಳಿಂದ 4 ಅವಾರ್ಡ್ ಸಿಕ್ಕಿದ್ದಕ್ಕೆ ಬಹಳ ಸಂತೋಷವಾಗುತಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ಈಗ ‘ಕಾಂತಾರ: ಚಾಪ್ಟರ್ 2’, ‘ಕೆಜಿಎಫ್ 3’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.