3 ಅಡಿ ಎತ್ತರದ ವ್ಯಕ್ತಿಯೊಂದಿಗೆ 5 ಅಡಿ ಎತ್ತರದ ಮಹಿಳೆ ಮದುವೆಯಾಗಿ ನಾಲ್ಕು ಮಕ್ಕಳನ್ನು ಪಡೆದಿದ್ದು, ವಿಶ್ವದಾಖಲೆಗೆ ಕಾರಣರಾಗಿದ್ದಾರೆ.
ಅಮೆರಿಕಾದಲ್ಲಿನ ಲ್ಯಾರಿ ಮೆಕ್ ಡೊನೆಲ್ ಹಾಗೂ ಆತನ ಪತ್ನಿ ಜೆಸ್ಸಿಕಾ ಬರ್ನ್ಸ್ ಮೆಕ್ ಡೊನೆಲ್ ತಮ್ಮ ಎತ್ತರದ ಅಂತರದಿಂದ ಈಗ ಸುದ್ದಿಯಾಗಿದ್ದಾರೆ. 3 ಅಡಿ ಎತ್ತರದ ಲ್ಯಾರಿ ಮೆಕ್ಡೊನೆಲ್(42), 5 ಅಡಿ ಎತ್ತರದ ಪತ್ನಿ(40) ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಅಲ್ಲದೇ, ಈ ಜೋಡಿ ಈಗ ನಾಲ್ಕು ಮಕ್ಕಳನ್ನು ಹೊಂದಿದೆ. ಈ ಜೋಡಿಯ ಪ್ರೀತಿ ಕಂಡು ಈಗ ಎಲ್ಲರೂ ಹಾರೈಸುತ್ತಿದ್ದಾರೆ.
ಇವರಿಬ್ಬರೂ ಬಾಲ್ಯದಿಂದ ಸ್ನೇಹಿತರು. ಜೆಸ್ಸಿಕಾ ಬೇರೆ ಪ್ರೀತಿಯಲ್ಲಿ ಇದ್ದಿದ್ದರಿಂದ ಇವರಿಬ್ಬರು ದೂರ ಉಳಿದಿದ್ದರು. ಆದರೆ ಜೆಸ್ಸಿಕಾಗೆ ಬ್ರೇಕಪ್ ಆದ ನಂತರ ಇವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಹಲವು ವರ್ಷಗಳ ಡೇಟಿಂಗ್ ನಂತರ ಮದುವೆಯಾಗಿದ್ದಾರೆ. ಈಗ ಈ ಜೋಡಿಗೆ 1, 13, 15, 16 ವರ್ಷದ ನಾಲ್ವರು ಮಕ್ಕಳಿದ್ದಾರೆ. ಈ ಜೋಡಿ ಈಗ ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ.