ರಾಯಚೂರು: ಎರಡು ಬೈಕ್ ಗಳಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಆದೋನಿ ತಾಲೂಕಿನ ಪಾಂಡವಗಲ್ ಗ್ರಾಮದ ಬಳಿ ನಡೆದಿದೆ. ಗಂಗಾವತಿಯಿಂದ ಮಂತ್ರಾಲಯಕ್ಕೆ ಹೊರಟಿದ್ದ ಬಸ್, ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿ ಹೊರಟಿದ್ದವರು ಸಾವನ್ನಪ್ಪಿದ್ದಾರೆ. ಹೇಮಾದ್ರಿ, ಪತ್ನಿ ನಾಗರತ್ನಮ್ಮ, ಮಗ ದೇವರಾಜು, ಈರಣ್ಣ, ಆದಿಲಕ್ಷ್ಮಿ ಸಾವನ್ನಪ್ಪಿದ್ದಾರೆ.
ಆದೋನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.