ಭಾರತದ ಆಪರೇಷನ್ ಸಿಂಧೂರದ ದಾಳಿಗೆ 51 ಮಂದಿ ಪಾಕಿಸ್ತಾನಿಗಳು ಹತರಾಗಿದ್ದಾರೆ. ಈ ಬಗ್ಗೆ ಖುದ್ದು ಪಾಕಿಸ್ತಾನವೀಗ ಹೇಳಿಕೆ ಬಿಡುಗಡೆ ಮಾಡಿದ್ದು, 51 ಜನರ ಪೈಕಿ 11 ಮಂದಿ ಸೇನಾಧಿಕಾರಿಗಳೂ ಬಲಿಯಾಗಿದ್ದಾರೆ ಅಂತಾ ಸ್ಪಷ್ಟಪಡಿಸಿದೆ. ಮೃತ 51 ಮಂದಿ ಪೈಕಿ 7 ಮಹಿಳೆಯರು ಸೇರಿ 15 ಮಂದಿ ಮಕ್ಕಳೊಟ್ಟಿಗೆ ಒಟ್ಟು 40 ನಾಗರಿಕರು ಸಾವನಪ್ಪಿದ್ದಾರೆ.
121ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರಂತೆ. ಇನ್ನು ಸೇನೆಯ ನಾಯಕ್ ಅಬ್ದುಲ್ ರೆಹಮಾನ್, ಲ್ಯಾನ್ಸ್ ನಾಯಕ್ ದಿಲಾವರ್ ಖಾನ್, ಲ್ಯಾನ್ಸ್ ನಾಯಕ್ ಇಕ್ರಮುಲ್ಲಾ, ನಾಯಕ್ ವಕಾರ್ ಖಾಲಿದ್, ಮೊಹಮದ್ ಅಬೀಲ್ ಅಕ್ಬರ್, ನೈಸರ್ ಸೇರಿದಂತೆ ವಾಯುಸೇನೆಯ ಸ್ಕ್ಯಾಡನ್ ಲೀಡರ್ ಉಸ್ಮಾ ಯೂಸಫ್, ಚೀಫ್ ಟೆಕ್ನೀಷಿಯನ್ ಔರಂಗಜೇಬ್, ಸೀನಿಯರ್ ಟೆಕ್ನೀಷಿಯನ್ ನಜೀಬ್, ಟೆಕ್ನೀಷಿಯನ್ ಫಾರೂಕ್, ಸೀನಿಯರ್ ಟೆಕ್ನೀಷಿಯನ್ ಮುಬ್ಬಶೀರ್ ಹತರಾಗಿದ್ದಾರೆ ಅಂತಾ ಸೇನಾ ಮಾಧ್ಯಮ ಹೇಳಿಕೆ ಖಚಿತ ಪಡಿಸಿದೆ.