ಮದ್ಯದ ಅಮಲಿನಲ್ಲಿದ್ದ ಪತ್ನಿ, ಪತಿಯನ್ನು ನಿಂದಿಸಿ ಕೊಲೆಯಾಗಿರುವ ಘಟನೆ ನಡೆದಿದೆ. ಈ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಮಂಗಳವಾರ ಮೈತ್ರಿ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಣಿ ನಗರದ ಕೊಳೆಗೇರಿಯಲ್ಲಿ ಈ ಘಟನೆ ನಡೆದಿದೆ.
ಕೊಲೆ ಮಾಡಿದ ನಂತರ ವ್ಯಕ್ತಿಯು ಶವವನ್ನು ಕೋಣೆಯಲ್ಲಿ ಬಚ್ಚಿಟ್ಟು, ಎರಡು ದಿನಗಳ ಕಾಲ ಅದರೊಂದಿಗೆ ವಾಸಿಸಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿರುವ ವ್ಯಕ್ತಿ ಪತ್ನಿ ಹಾಗೂ ಮೂವರು ಪುತ್ರರೊಂದಿಗೆ ವಾಸಿಸುತ್ತಿದ್ದ. ಪತ್ನಿ ಮದ್ಯವ್ಯಸನಿಯಾಗಿದ್ದು, ಮಧ್ಯಾಹ್ನ ಕುಡಿದು ಬಂದು ಆತನನ್ನು ನಿಂದಿಸಲು ಆರಂಭಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಮರದ ಹಲಗೆಯಿಂದ ಹೊಡೆದು ಕೊಂದಿದ್ದಾನೆ. ನಂತರ ಕೋಣೆಯಲ್ಲಿ ಶವ ಬಚ್ಚಿಟ್ಟಿದ್ದಾನೆ. ಹಿರಿಯ ಮಗ ಮನೆಗೆ ಬಂದಾಗ ಮಾಹಿತಿ ಸಿಕ್ಕಿತ್ತು. ನಂತರ ಆತ ಪೊಲೀಸರಿಗೆ ತಿಳಿಸಿದ್ದಾನೆ. ಸದ್ಯ ಆರೋಪಿ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


















