ಯಾದಗಿರಿ: ಮನೆ ಎದುರೇ ದಲಿತ ವ್ಯಕ್ತಿಯನ್ನು ಅನ್ಯ ಕೋಮಿನ ಯುವಕರು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಭಯಾನಕ ಘಟನೆ ಜಿಲ್ಲೆಯ ಶಹಾಪೂರ ಪೇಟ್ ಬಡಾವಣೆಯಲ್ಲಿ ನಡೆದಿದೆ. ರಾಕೇಶ್ (22) ಕೊಲೆಯಾಗಿರುವ ದುರ್ದೈವಿ. ಫಯಾಜ್ ಹಾಗೂ ಆಸೀಫ್ ಕೊಲೆ ಮಾಡಿರುವ ಆರೋಪಿಗಳು. ಆರೋಪಿಗಳು ಕ್ಷುಲ್ಲಕ ಕಾರಣಕ್ಕೆ ಕೊಲೆಯಾಗಿರುವ ರಾಕೇಶ್ ಜೊತೆ ಜಗಳ ಮಾಡಿ ಕೊಲೆ ಮಾಡಿದ್ದಾರೆ ಎಂದು ರಾಕೇಶ್ ಕುಟುಂಬಸ್ಥರು ಹೇಳಿದ್ದಾರೆ.
ಅಲ್ಲದೇ, ಘಟನೆ ಖಂಡಿಸಿರುವ ಹಿಂದೂ ಸಂಘಟನೆಗಳು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಅಲ್ಲದೇ, ಪ್ರಕರಣ ಮರೆಮಾಚಲು ಮುಂದಾಗಿದ್ದರು. ತಡರಾತ್ರಿಯವರೆಗೂ ಕೇಸ್ ದಾಖಲಿಸಿಕೊಂಡಿರಲಿಲ್ಲ ಎಂದು ಆರೋಪಿಸಿವೆ. ಆನಂತರ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಸಂಘಟನೆ ಕಾರ್ಯಕರ್ತರು ಹೇಳಿದ್ದಾರೆ.
ಸ್ಥಳಕ್ಕೆ ಎಸ್ಪಿ ಸಂಗೀತಾ ಜೀ ತೆರಳಿದ್ದರು. ಈ ಕುರಿತು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.