ನವದೆಹಲಿ: ತಿರುಮಲ ಬೆಟ್ಟದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ(Venkateswara Swamy temple) ಭೇಟಿ ನೀಡುವುದಕ್ಕೂ ಮೊದಲು ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಗೆ ನಿಷೇಧಾಜ್ಞೆ ಧಿಕ್ಕರಿಸದಂತೆ ಪೊಲೀಸರು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಪಿಟಿಐ ಸುದ್ದಿ ಮೂಲದಿಂದ ತಿಳಿದು ಬಂದಿದೆ.
ಸೆಕ್ಷನ್ 30 ಅನ್ನು ಉಲ್ಲಂಘಿಸದಂತೆ ಪಕ್ಷದ ಹಲವಾರು ಸದಸ್ಯರಿಗೆ ಜಿಲ್ಲಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸೆಕ್ಷನ್ 30 ಸಾರ್ವಜನಿಕ ಸಭೆಗಳು ಮತ್ತು ಮೆರವಣಿಗೆಗಳನ್ನು ನಿಯಂತ್ರಿಸುತ್ತದೆ. ತಿರುಪತಿ ಲಡ್ಡುಗಳಲ್ಲಿ ಕೊಬ್ಬಿನಾಂಶ ಬಳಕೆಯ ವಿವಾದ ದೊಡ್ಡ ಪ್ರಮಾಣದಲ್ಲಿ ಕಿಡಿ ಹೊತ್ತಿಕೊಂಡಿದೆ.
ಇಂದು ಜಗನ್ ಮೋಹನ್ ರೆಡ್ಡಿ ತಿರುಪತಿ ದರ್ಶನಕ್ಕೆ ಬರುವುದಾಗಿ ಘೋಷಿಸಿದ್ದರು. ಹೀಗಾಗಿ ಪಕ್ಷದ ಕಾರ್ಯಕರ್ತರನ್ನು ಸೇರಿಸುವಂತೆ ಸಂದೇಶಗಳು ಹರಿದಾಡುತ್ತಿದ್ದವು. ಹೀಗಾಗಿ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
“ತಿರುಪತಿಯ ಕೆಲವು ಸ್ಥಳಗಳಲ್ಲಿ ಜನರು ಸೇರುವಂತೆ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ ಹಲವಾರು ಪೋಸ್ಟ್ ಗಳನ್ನು ನಾವು ಗಮನಿಸಿದ್ದೇವೆ. ಈ ನೋಟಿಸ್ ಗಳು ಆದೇಶಗಳನ್ನು ಧಿಕ್ಕರಿಸದಂತೆ ಎಚ್ಚರಿಕೆ ನೀಡುವುದೇ ಹೊರತು ಬೇರೇನೂ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಲಡ್ಡು ಪ್ರಸಾದಗಳಲ್ಲಿ ಅಶುದ್ಧ ಪದಾರ್ಥಗಳನ್ನು ಬಳಸಲಾಗಿದೆ ಎದು ಆರೋಪಿಸಿ ಸಿಎಂ ಚಂದ್ರಬಾಬು ನಾಯ್ಡು ಸುಳ್ಳು ಆರೋಪ ಮಾಡಿದ್ದಾರೆ. ಅವರ ಸುಳ್ಳು ಆರೋಪ ಮಾಡಿದ ‘ಪಾಪ’ಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ರಾಜ್ಯಾದ್ಯಂತ ನಡೆಸುತ್ತಿರುವ ಧಾರ್ಮಿಕ ವಿಧಿಗಳ ಭಾಗವಾಗಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ.
ಹೀಗಾಗಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಜಗನ್ ಮೋಹನ್ ರೆಡ್ಡಿ ಶುಕ್ರವಾರ ಸಂಜೆ 4ಕ್ಕೆ ಗನ್ನವರಂ ವಿಮಾನ ನಿಲ್ದಾಣದಿಂದ ರೇಣಿಗುಂಟಕ್ಕೆ ಹೊರಟು ಸಂಜೆ 7ಕ್ಕೆ ತಿರುಮಲ ತಲುಪುವ ನಿರೀಕ್ಷೆಯಿದೆ. ಶನಿವಾರ ಬೆಳಗ್ಗೆ 10.20ಕ್ಕೆ ತಿರುಮಲದಲ್ಲಿರುವ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಲಿದ್ದಾರೆ.