ಸೋಲದೇವನಹಳ್ಳಿ : ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಮಾದರಿಯಾಗಿಟ್ಟುಕೊಂಡು ಬಟ್ಟೆ ಬಿಚ್ಚಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ದರ್ಶನ್ ಪ್ರಕರಣ ನೋಡಿ ಬಟ್ಟೆ ಬಿಚ್ಚಿ ಹಲ್ಲೆ ಮಾಡಿ ಯುವಕರು ಕೀಚಕ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರೀತಿಯ ವಿಚಾರಕ್ಕೆ ಯುವಕನ ಬಟ್ಟೆ ಬಿಟ್ಟಿ ಹಲ್ಲೆ ಮಾಡಿ. ಮರ್ಮಾಂಗವನ್ನು ತುಳಿದು ಅಮಾನುಷ ಕೃತ್ಯ ಎಸಗಿದ್ದಾರೆ. ಆರೋಪಿಗಳು ಹಲ್ಲೆ ಮಾಡುವ ಸಂದಭದಲ್ಲಿ ರೇಣುಕಾಸ್ವಾಮಿ ಹೆಸರು ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಂತೆ ಈ ಕೇಸ್ ಕೂಡ ಆಗುತ್ತೆ ಎಂದು ವಿಡಿಯೋ ಮಾಡಿದ್ದಾರೆ.
ಎ1 ಆರೋಪಿ ಹೇಮಂತ ಹಾಗೂ ಎ2 ಆರೋಪಿ ನಾನು ಎಂದು ವಿಡಿಯೋ ದಲ್ಲಿ ಹೇಳಿದ್ದಾರೆ. 8-10 ಯುವಕರು ಸೇರಿ ಬಟ್ಟೆ ಬಿಚ್ಚಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಕುಶಾಲ್ ಎಂಬಾತನ ಮೇಲೆ ಎಂಟು ಹತ್ತು ಮಂದಿ ಯುವಕರು ಹಲ್ಲೆ ಮಾಡಿದ್ದಾರೆ. ಕಾಲೇಜಿಗೆ ಹೋಗುವಾಗ ಕುಶಾಲ್ ಹಾಗೂ ಯುವತಿ ಮಧ್ಯೆ ಪ್ರೀತಿ ಮೂಡಿದೆ. ಎರಡು ವರ್ಷದ ಪ್ರೀತಿ ಕೆಲ ತಿಂಗಳ ಹಿಂದೆ ಮುರಿದು ಬಿದ್ದಿತ್ತು. ಈ ವೇಳೆ ಯುವತಿಗೆ ಬೇರೊಂದು ಹುಡುಗನ ಪರಿಚಯವಾಗಿತ್ತು. ಇದನ್ನು ಸಹಿಸಲಾಗದ ಕುಶಾಲ್ ಯುವತಿಗೆ ಅಶ್ಲೀಲ ಮೆಸೇಜ್ ಮಾಡಿದ್ದ.
ಯುವತಿ ತನ್ನ ಗೆಳೆಯ ಹಾಗೂ ಸ್ನೇಹಿತರ ಜೊತೆ ಸೇರಿ ಕಿಡ್ನಾಪ್ ಹಾಗೂ ಹಲ್ಲೆ ಪ್ಲಾನ್ ಮಾಡಿದ್ದು, ಅದರಂತೆ ಕೂತು ಬಗೆ ಹರಿಸಿಕೊಳ್ಳುವುದಾಗಿ ಕರೆಸಿ ಕಾರಿನಲ್ಲಿ ಕಿಡ್ನಾಪ್ ಮಾಡಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ಮಾಡಿಸಿದ್ದಾರೆ. ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಆರೋಪಿಗಳಾದ ಹೇಮಂತ್, ಯಶ್ವಂತ್, ಶಿವಶಂಕರ್, ಶಶಾಂಕ್ ಗೌಡ ಬಂಧನಕ್ಕೊಳಪಡಿಸಲಾಗಿದೆ.