ಕಲಬುರ್ಗಿ: ಪಕ್ಕದ ಮನೆಯ ಯುವಕ ಎಂದು ಸಲುಗೆಯಿಂದ ಇದ್ದಿದ್ದಕ್ಕೆ ಯುವತಿಯನ್ನು ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಕಲಬುರಗಿ ನಗರದ ಭಾರತ ನಗರ ತಾಂಡಾದಲ್ಲಿ ನಡೆದಿದ್ದು, ಯುವಕನ ಈ ಕೃತ್ಯಕ್ಕೆ ಮನನೊಂದ ಯುವತಿ ಆತ್ಮಹತ್ಯೆಗೆ ಮುಂದಾಗಿದ್ದಾಳೆ.
ಅಂಬಿಕಾ ಚವ್ಹಾಣ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಅದೇ ಭಾರತ ನಗರ ತಾಂಡಾದ ಯುವಕ ವಿನೋಧ ರಾಠೋಡ್ ಅತ್ಯಾಚಾರವೆಸಗಿದ ಆರೋಪಿ. ಸದ್ಯ ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುವತಿ ಅಂಬಿಕಾ ಹಾಗೂ ಯುವಕ ವಿನೋಧ ರಾಠೋಡ್ ಅಕ್ಕ ಪಕ್ಕದ ಮನೆಯವರು. ಪಕ್ಕದ ಮನೆಯವನು ಎಂದು ಅಂಬಿಕಾ, ವಿನೋಧ ಜೊತೆಗೆ ಸಲುಗೆಯಿಂದ ಇದ್ದಳು. ಇದನ್ನೇ ದುರುಪಯೋಗ ಮಾಡಿಕೊಂಡ ವಿನೋಧ್ ಎರಡು ದಿನಗಳ ಹಿಂದೆ ಆಕೆಯನ್ನು ಉಪಾಯವಾಗಿ ಲಾಡ್ಜ್ ಗೆ ಕರೆದೊಯ್ದು, ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ಮಾಡಿದ್ದಾನೆ ಎಂದು ಅಂಬಿಕಾ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಿಂದ ಮನನೊಂದ ಯುವತಿ ಅಂಬಿಕಾ ಮನೆಗೆ ಬಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಇದನ್ನು ಗಮನಿಸಿದ ಮನೆಯವರು ತಕ್ಷಣ ನೆರವಿಗೆ ಬಂದು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಯುವತಿ ಆತ್ಮಹತ್ಯೆಗೆ ಕಾರಣ ಬಿಚ್ಚಿಟ್ಟಿದ್ದಾಳೆ. ಸದ್ಯ ಅಂಬಿಕಾ ಸ್ಥಿತಿ ಗಂಭೀರವಾಗಿದ್ದು,ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ವಿನೋಧ್ ವಿರುದ್ದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮನೆಯೊಳಗೆ ರಹಸ್ಯ ಸುರಂಗ ಕೊರೆದಿದ್ದ ಡ್ರಗ್ಸ್ ಕಿಂಗ್‌ಪಿನ್ : ಪೊಲೀಸ್ ದಾಳಿ ವೇಳೆ ಎಸ್ಕೇಪ್!



















