ಬೆಂಗಳೂರು: ದೇಶದಲ್ಲೀಗ ಯುವಕ-ಯುವತಿಯರು ಸುಲಭವಾಗಿ ಸಾಲ ಪಡೆಯಬಹುದು. ಒಬ್ಬ ವ್ಯಕ್ತಿಯು ಉದ್ಯೋಗಕ್ಕೆ ಸೇರುತ್ತಲೇ ಸಾಲ ನೀಡಲು ಹಲವು ಬ್ಯಾಂಕುಗಳು ಮುಂದೆ ಬರುತ್ತವೆ. ಓದುತ್ತಿರುವಾಗಲೇ ಈಗ ಸಾಲ ಪಡೆಯಬಹುದಾಗಿದೆ. ಹಾಗಾಗಿ, ದೇಶದ ಯುವಕ-ಯುವತಿಯರು ಯಾವ ಕಾರಣಕ್ಕಾಗಿ ಹೆಚ್ಚು ಸಾಲ ಮಾಡುತ್ತಾರೆ ಎಂಬುದರ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಮಹತ್ವದ ಸಂಗತಿ ಬಯಲಾಗಿದೆ.
ಹೌದು, ಡಿಜಿಟಲ್ ಲೆಂಡಿಂಗ್ ಪ್ಲಾಟ್ ಫಾರ್ಮ್ ಆಗಿರುವ ಎಂಪಾಕೆಟ್ ಎಂಬ ಸಂಸ್ಥೆಯು ಸಮೀಕ್ಷೆ ನಡೆಸಿದೆ. ಇದರ ಪ್ರಕಾರ, ಶೇ.63ರಷ್ಟು ಯುವಜನತೆಯು ಸಕಾರಾತ್ಮಕ ಸಂಗತಿಗಾಗಿ ಸಾಲ ಮಾಡುತ್ತಾರೆ. ಕಲಿಕೆ, ಅಧ್ಯಯನ, ಮನೆ, ಭೂಮಿ ಖರೀದಿಗಾಗಿ ಸಾಲ ಮಾಡುತ್ತಾರೆ. ಇದು ಧನಾತ್ಮಕ ಸಂಗತಿಯಾಗಿದೆ ಎಂದು ಎಂಪಾಕೆಟ್ ವರದಿ ತಿಳಿಸಿದೆ.
ಇನ್ನು, ಶೇ.40ರಷ್ಟು ಜನ ವೃತ್ತಿಯಲ್ಲಿಏಳಿಗೆ ಹೊಂದುವ ದಿಸೆಯಲ್ಲಿಕೌಶಲಗಳನ್ನ ವೃದ್ಧಿಸಿಕೊಳ್ಳಲು, ಹೊಸ ಹೊಸ ಕೋರ್ಸ್ ಕಲಿಯಲು ಸೇರಿ ಹಲವು ಸಕಾರಾತ್ಮಕ ಕಾರಣಗಳಿಗಾಗಿ ಸಾಲ ಮಾಡುತ್ತಾರೆ. ಅದೇ ರೀತಿ ಶೇ.20ರಷ್ಟು ಯುವಜನತೆಯು ಜೀವನ ವಿಧಾನವನ್ನು ಸುಧಾರಿಸಿಕೊಳ್ಳಲು ಸಾಲದ ಹಣವನ್ನು ಬಳಸುತ್ತಾರೆ. ಶೇ.16.5ರಷ್ಟು ಜನ ಶಿಕ್ಷಣಕ್ಕಾಗಿ ಸಾಲ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಅದೇ ರೀತಿ, ಶೇ.26.3ರಷ್ಟು ಜನ ಆರೋಗ್ಯದ ಕಾರಣಕ್ಕಾಗಿ ಸಾಲಗಾರರಾಗಿದ್ದೇವೆ ಎಂದು ತಿಳಿಸಿದ್ದಾರೆ. ಅದೇ ರೀತಿ, ಶೇ.12.4ರಷ್ಟು ಯುವಜನತೆಯು, ತುರ್ತು ಪರಿಸ್ಥಿತಿಗಳ ಕಾರಣದಿಂದಾಗಿ ಸಾಲ ಮಾಡಬೇಕಾಯಿತು ಎಂಬುದಾಗಿ ತಿಳಿಸಿದ್ದಾರೆ. ಸುಮಾರು 3 ಸಾವಿರ ಯುವಕ-ಯುವತಿಯರನ್ನು ಸಂಪರ್ಕಿಸಿ ಸಮೀಕ್ಷಾ ವರದಿಯನ್ನು ತಯಾರಿಸಲಾಗಿದೆ.
ಇದನ್ನೂ ಓದಿ : ಕೆಜಿಎಫ್ “ಚಾಚಾ” ಹರೀಶ್ ರಾಯ್ ವಿಧಿವಶ



















