ಬೆಂಗಳೂರು: ಯುವನಟ ಸಂತೋಷ್ ಬಾಲರಾಜ್ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಗಿದ್ದು, ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಚಿಕ್ಕ ಕೆರೆ ಬಳಿ ಸಂತ ವನಚಿನ್ನಪ್ಪವರ ಪುಣ್ಯ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ.
ಕ್ರೈಸ್ತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದ್ದು, ಫಾದರ್ ಶಾಂತ ರಾಜು ಥಾಮಸ್ ಅಂತಿಮ ಪ್ರಾರ್ಥನೆ ನರೆವೇರಿಸಲಿದ್ದಾರೆ. ಅಂತಿಮ ಸಂಸ್ಕಾರದಲ್ಲಿ ಕುಟುಂಬಸ್ಥರು, ಆಪ್ತರು ಸೇರಿದಂತೆ ಹಲವಾರು ಜನರು ಭಾಗಿಯಾಗಲಿದ್ದು, ತಂದೆ ಸಮಾಧಿ ಬಳಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.