ಪ್ರತಿ ಭಾರತೀಯನಿಗೂ ತನ್ನದೇ ಸ್ವಂತ ಮನೆ ಇರಬೇಕೆನ್ನುವುದು ಕನಸು. ಹೀಗಾಗಿ ಜೀವವಾನವಿಡಿ ದುಡಿದು ಉಳಿಸಿದ ಹಣದಲ್ಲಿ ಕನಸಿನ ಗೂಡು ಕಟ್ಟಿಕೊಳ್ಳುವುದು ಎಂಥವರಿಗೂ ಹೆಮ್ಮೆ. ಹಾಗಂತಾ ಪ್ರತಿಯೊಬ್ಬರು ಅವರ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವಂತೆ ತಮ್ಮ ಬಜೆಟ್ ನಲ್ಲಿ ಮನೆ ಖರೀದಿಸ್ತಾರೆ. ಆದರೆ ಮುಂಬೈನಲ್ಲೊಂದು ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ಫ್ಲ್ಯಾಟ್ ವೊಂದು ಈಗ ದಾಖಲೆಯ ಬೆಲೆಗೆ ಮಾರಾಟವಾಗುವ ಮೂಲಕ ಇತಿಹಾಸ ನಿರ್ಮಿಸಿದೆ.
ಮುಂಬೈ ರಿಯಲ್ ಎಸ್ಟೇಟ್ ವಲಯವೇ ತಬ್ಬಿಬ್ಬು
ಯೆಸ್, ಇದು ಇವತ್ತಿನವರೆಗಿನ ಮುಂಬೈ ರಿಯಲ್ ಎಸ್ಟೇಟ್ ನ ಬಲುದೊಡ್ಡ ಬಿಕರಿ ಅಂತಲೇ ಹೇಳಲಾಗುತ್ತಿದೆ. ಯಾಕೆಂದ್ರೆ ಈ ಅಲ್ಟ್ರಾ ಲಕ್ಸುರಿ ಡ್ಯೂಪ್ಲೆಕ್ಸ್ ಪ್ಲ್ಯಾಟ್ ಖರೀದಿದಾರರು ಹೊಸ ಮನೆಯ ನೋಂದಣಿ ಶುಲ್ಕವಾಗಿ ಪಾವತಿಸಿರುವುದು ಬರೋಬ್ಬರಿ 63 ಕೋಟಿ ಅಂದರೆ ನೀವು ನಂಬಲೇಬೇಕು. ಈ ಮನೆ ಒಡತಿ ಬೇರಾರೂ ಅಲ್ಲ ಭಾರತದ ಫಾರ್ಮಾ ವಲಯದ ಖ್ಯಾತ ಉದ್ಯಮಿ ಲೀನಾ ಗಾಂಧಿ ತಿವಾರಿ.
639 ಕೋಟಿ ರೂ.ಗೆ ಎರಡಂತಸ್ತಿನಲ್ಲಿ ಡ್ಯೂಪ್ಲೆಕ್ಸ್ ಪ್ಲ್ಯಾಟ್ ಖರೀದಿ
ಯುಎಸ್ ವಿ ಇಂಡಿಯಾ ಫಾರ್ಮಾ ಕಂಪನಿಯ ಒಡತಿ ಈ ಲೀನಾ ಗಾಂಧಿ ತಿವಾರಿ. ಕುಟುಂಬದ ಬಳವಳಿಯಾಗಿ ಬಂದ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಲೀನಾ, ಇವತ್ತು ಮುಂಬೈನಲ್ಲಿ ಬರೋಬ್ಬರಿ 639 ಕೋಟಿ ರೂ. ಕೊಟ್ಟು ಎರಡು ಹೊಸ ಮನೆ ಖರೀದಿಸಿದ್ದಾರೆ. ಮುಂಬೈನ ಪ್ರತಿಷ್ಠಿತ ವರ್ಲಿ ಪ್ರದೇಶದಲ್ಲಿರುವ ಈ ಸೀ ಫೇಸಿಂಗ್ ಪ್ಲ್ಯಾಟ್ ಗಳು 32 ಮತ್ತು 35ನೇ ಅಂತಸ್ತಿನಲ್ಲಿವೆ. ಒಟ್ಟು 40 ಅಂತಸ್ತುಗಳ ಈ ಭವ್ಯ ಅಪಾರ್ಟ್ ಮೆಂಟ್ ನಲ್ಲಿ ಲೀನಾ 22,572 ಸ್ವಯರ್ ಫೀಟ್ ನ ಪ್ಲ್ಯಾಟ್ ತಮ್ಮದಾಗಿಸಿಕೊಂಡಿದ್ದಾರೆ. ಈ ಆಸ್ತಿ ನೋಂದಣಿಗೆ ಲೀನಾ 63.9 ಕೋಟಿ ಶುಲ್ಕ ಪಾವತಿಸಿದ್ದಾರೆ. ಹಾಗೆ ನೋಡಿದರೆ ಈ ಖರೀದಿಯಲ್ಲಿ ಪ್ರತಿ ಸ್ಕ್ವಯರ್ ಫೀಟ್ ಗೆ 2.83 ಲಕ್ಷ ಕೋಟಿ ರೂ. ಪಾವತಿಸಿದ ಹಾಗಾಗಿದೆ.
ಯಾರು ಈ ಲೀನಾ ಗಾಂಧಿ ತಿವಾರಿ…?
ಲೀನಾ ಗಾಂಧಿ ತಿವಾರಿ. ದೇಶದ ಫಾರ್ಮಾ ವಲಯದ ಅತ್ಯಂತ ಸುಪ್ರಸಿದ್ಧ ಹೆಸರು. ಅಸಲಿಗೆ ಲೀನಾರ ತಾತ ವಿಠಲ್ ಬಾಲಕೃಷ್ಣ ಗಾಂಧಿ ಈ ಯುಎಸ್ ವಿ ಫಾರ್ಮಾ ಕಂಪನಿಯನ್ನು 1961ರಲ್ಲಿ ಸ್ಥಾಪಿಸಿದ್ದರು. ಇದೇ ಸಂಸ್ಥೆಯ ಒಡತಿಯಾಗಿರುವ ಲೀನಾ ದೇಶದ ಆಗರ್ಭ ಶ್ರೀಮಂತರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ ಗಣಿತದ ಅನ್ವಯ ಲೀನಾರ ಒಟ್ಟು ಆಸ್ತಿ 3.9 ಬಿಲಿಯನ್ ಡಾಲರ್ ಗಳಷ್ಟಿದೆ. 2023ರ ಫೋರ್ಬ್ಸ್ ಪಟ್ಟಿಯಲ್ಲಿ ಲೀನಾ ಭಾರತದ 45ನೇ ಅತ್ಯಂತ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಇದೇ ವರ್ಲಿ ವ್ಯಾಪ್ತಿಯಲ್ಲಿ ಹಿಂದೆ ಖ್ಯಾತ ಬ್ಯಾಂಕರ್ ಉದಯ್ ಕೋಟೆಕ್ 400 ಕೋಟಿ ರೂ.ಗೆ ಮನೆ ಖರೀದಿಸಿದ್ದರು. ಅಷ್ಟೇ ಅಲ್ಲಾ ಡಿ ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣ ಬಿಮಾನಿ ಇದೇ ಪ್ರದೇಶದಲ್ಲೇ 1,238 ಕೋಟಿ ರೂ. ನೀಡಿ 28 ಮನೆಗಳನ್ನು ಖರೀದಿಸಿದ್ದಾರೆ.