ಪ್ಯಾನ್ ಇಂಡಿಯಾ ಲೋಕವನ್ನೇ ಶೇಕ್ ಮಾಡೋ ದಾರಿಯಲ್ಲಿ ಕಾಂತಾರ ಮಹಾಭಾಗ -1 ಎಂಟ್ರಿ ಕೊಡುತ್ತಿದೆ. ಅಡ್ವಾನ್ಸ್ ಬುಕಿಂಗ್‌ನಲ್ಲಿ ನಿಮಿಷಕ್ಕೊಂದು ದಾಖಲೆ ಬರಿತಿರೋ ಕಾಂತಾರದ ಮೋಡಿ, ಒಂದು ಸಿನಿಮಾ ಹಿಸ್ಟರಿ ಕ್ರಿಯೇಟ್ ಮಾಡೋದು ಪಕ್ಕಾ ಎನ್ನಲಾಗುತ್ತಿದೆ.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯಕ್ಕೆ ಭಾರತದ ರೌಂಡ್ ಹೊಡೆಯುತ್ತಾ ಕಾಂತರಾ ಚಿತ್ರದ ಪ್ರಮೋಷನ್ ಕೆಲಸಗಳನ್ನ ಖುಷಿ ಖುಷಿಯಾಗಿ ಮಾಡುತ್ತಿದ್ದಾರೆ. ಭಾರತದ ವಿವಿಧ ನಗರಗಳಿಗೆ ತೆರಳಿ ಪ್ರಚಾರದ ಕಿಚ್ಚು ಹಚ್ಚಿರೋ ರಿಷಬ್ ಶೆಟ್ಟಿ, ಬಿಡುಗಡೆಗೂ ಮುನ್ನವೇ ಸಿಕ್ಕ ರೆಸ್ಪಾನ್ಸ್ ಗೆ ಫುಲ್ ಥ್ರಿಲ್ ಆಗಿದ್ದಾರೆ. ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದೇ ತಡ, ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಗಳನ್ನು ಖರೀದಿಸಿದ್ದಾರೆ. 1 ಗಂಟೆಯಲ್ಲಿ 28 ಸಾವಿರ ಟಿಕೆಟ್ ಬುಕ್ ಆಗಿರೋದು ಕಾಂತಾರ ಫೀವರ್ ನ ಬಿಗ್ ಎಕ್ಷಂಪಲ್. ಬರೀ ಕರ್ನಾಟಕದಲ್ಲಿ ಮಾತ್ರವಲ್ಲದೆ, ದೆಹಲಿ,ಮುಂಬೈ,ಚೆನ್ನೈ,ಕೊಲ್ಕತ್ತಾ ಹಾಗೂ ಹೈದ್ರಾಬಾದ್‌ನಲ್ಲೂ ಕಾಂತಾರ ಆರ್ಭಟ ಶುರುವಾಗಿಬಿಟ್ಟಿದೆ.

ಬಿಗ್ ಸ್ಟರ್‌ಗಳ ಬೆಂಬಲ ಕೂಡ ಕಾಂತಾರದ ಉತ್ಸಾಹಕ್ಕೆ ಮೈಲೇಜ್ ಕೊಡುತ್ತಿದೆ. ಸೆ.28ಕ್ಕೆ ಹೈದರಾಬಾದ್‌ನಲ್ಲಿ ನಡೆಯಲಿರೋ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಜೂ.NTR ಮುಖ್ಯ ಅತಿಥಿಯಾಗಿ ಆಗಮಿಸಿ ರಿಷಬ್ ಶೆಟ್ಟಿಗೆ ಸಾಥ್ ಕೊಡುತ್ತಾರೆ. ಮಾರನೇ ದಿನ ಮುಂಬೈ ಪ್ರೆಸ್ ಮೀಟ್‌ಗೆ ರಾಕಿಂಗ್ ಸ್ಟಾರ್ ಯಶ್ ಆಗಮಿಸೋ ಸಾಧ್ಯತೆಯಿದೆ. ರಿಷಬ್ ಶೆಟ್ಟಿ ಮತ್ತು ಜೂ.NTR ಬಹು ವರ್ಷಗಳ ಗೆಳೆಯರಾಗಿರೋ ಕಾರಣಕ್ಕೆ ಫ್ಯಾನ್ಸ್ ಒಂದೇ ವೇದಿಕೆಯಲ್ಲಿ ಇಬ್ಬರನ್ನ ನೋಡಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

ಅಂತೂ 28 ದೇಶಗಳಲ್ಲಿ 6700ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಕಾಂತಾರ, ಮೊದಲ ದಿನದ ಕಲೆಕ್ಷನ್ ನಲ್ಲೇ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡೋ ಟಾರ್ಗೆಟ್ ಇಟ್ಟುಕೊಂಡಿದೆ. ಮೊದಲ ದಿನವೇ ನಾವು ಸಿನಿಮಾ ನೋಡಬೇಕು ಎಂಬ ಕೆಲವು ಫ್ಯಾನ್ಸ್ ಗೆ ನಿರಾಸೆಯಾದರೂ ಅಚ್ಚರಿ ಇಲ್ಲ. ಅ.2 ಗಾಂಧಿಜಯಂತಿ ಪ್ರಯುಕ್ತ ರಜೆ ಇರೋ ಕಾರಣಕ್ಕೆ ಮೊದಲ ಶೋಗಳು ಹೌಸ್ ಫುಲ್ ಆಗಿರುತ್ತವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ದಿನಕ್ಕೆ 5 ಶೋ ಕೊಟ್ಟಿದ್ದಾರೆ. ಆದರೂ ಕಾಂತಾರ ಮೊದಲ ದಿನದ ಶೋಗಳು ಭರ್ತಿಯಾಗಿರೋದು ಕಾಂತಾರ ದಂತಕಥೆಯ ಬೇಡಿಕೆಯ ಹಬ್ಬ ಸೃಷ್ಟಿಸಿದೆ..!