“ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು” ಸಿನಿಮಾ ತಂಡದ ವಿರುದ್ಧ ಬಿಎಂಟಿಸಿ (bmtc)ದೂರು ದಾಖಲಿಸಿದೆ.
ಈ ಕುರಿತು ಬನಶಂಕರಿ ಪೋಲಿಸ್ ಸ್ಟೇಷನ್ (police station) ನಲ್ಲಿ ಬಿಎಂಟಿಸಿಯಿಂದ ದೂರು ದಾಖಲಾಗಿದೆ. ಸಿನಿಮಾ ಶೂಟಿಂಗ್ ಗೆಂದು ಬಿಎಂಟಿಸಿ ಬಸ್ ಬಾಡಿಗೆ ಪಡೆದು, ಬಿಎಂಟಿಸಿ ಸಂಸ್ಥೆಯ ವಿರುದ್ಧವೇ ವಿಡಿಯೋ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ಸಿನಿಮಾ ಶೂಟಿಂಗ್ ಗೆಂದು ಬಸ್ ಬಾಡಿಗೆ (rent)ಪಡೆದಿದ್ದ ಸಿನಿಮಾ ತಂಡ, ಬಿಎಂಟಿಸಿ (bmtc)ಬಸ್ ನಿಂದ ಅಪಘಾತವಾಗುತ್ತದೆ ಎಂಬಂತೆ ಚಿತ್ರಿಸಿ ಅಪಪ್ರಚಾರ ಮಾಡಿದೆ. ಬಿಎಂಟಿಸಿ ಬಸ್ ಹಿಂಭಾಗದಲ್ಲಿ ತಮ್ಮ ಸಿನಿಮಾದ ಪೋಸ್ಟರ್ (poster)ಅಂಟಿಸಿ, ಆ ಪೋಸ್ಟರ್ ನೋಡಿಕೊಂಡು ಬಂದು ವಾಹನ ಸವಾರರು ಡಿಕ್ಕಿ ಹೊಡೆಯುತ್ತಿದ್ದಾರೆ ಎಂಬಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ (social media) ಅಪ್ಲೋಡ್ ಮಾಡಿದ್ದಾರೆ.
ಈ ಸಿನಿಮಾ ತಂಡ ಒಂದು ದಿನಕ್ಕೆ 15 ಸಾವಿರ ರೂ. ನಂತೆ ಬಸ್ ಬಾಡಿಗೆ ಪಡೆದಿತ್ತು. ನಂತರ ಬಸ್ ನಲ್ಲಿ ಶೂಟಿಂಗ್ ಮಾಡಿದೆ. ಬಸ್ ಬಾಡಿಗೆ ಪಡೆದು ಬಿಎಂಟಿಸಿ ಬಸ್ ವಿರುದ್ಧವೇ ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಗುರುಪ್ರಸಾದ್ ಜಿಎನ್ ಪಿಚ್ಚರ್ ಶಾಪ್, (Guruprasad GN Pitcher Shop) ಸಂಸ್ಥೆ ಹಾಗೂ ಚಿತ್ರದಲ್ಲಿ ಭಾಗಿಯಾಗಿರುವ ಕಲಾವಿದರ ವಿರುದ್ಧ ದೂರು ದಾಖಲಿಸಲಾಗಿದೆ.
ಬಿಎಂಟಿಸಿ ಬೆಂಗಳೂರು ನಾಗರಿಕರಿಗೆ ಉತ್ತಮ ಸೇವೆ ನೀಡುತ್ತಿದ್ದು. ಜಾಹೀರಾತುಗಳಿಂದ (Advertisement) ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ. ಆದರೆ, ಈ ಚಿತ್ರ ಬಿಎಂಟಿಸಿ ವಿರುದ್ಧ ತಪ್ಪು ಸಂದೇಶ ನೀಡುವ ಪ್ರಯತ್ನ ಮಾಡಿದೆ. ಈ ವಿಡಿಯೋದಿಂದ ಸಾರ್ವಜನಿಕರಲ್ಲಿ ಬಿಎಂಟಿಸಿ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತಾಗಿದೆ. ಹೀಗಾಗಿ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಬಿಎಂಟಿಸಿ ಆಗ್ರಹಿಸಿದೆ.