ಹಾಸನ: ರಾಜ್ಯದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ನೀರಾವರಿ ಯೋಜನೆ ದಿಕ್ಕು ತಪ್ಪುತ್ತಿದೆ. ಬಯಲು ಸೀಮೆಯ ಕೆಲ ಸ್ಥಳಗಳಲ್ಲಿ ಕಾಮಗಾರಿ ಮುಗಿಯದ ಹಿನ್ನಲೆ, ಅಧಿಕಾರಿಗಳು ಎತ್ತಿನಹೊಳೆ ಯೋಜನೆಯ ದಿಕ್ಕು ಬದಲಿಸಿ ನೀರು ಹರಿಸಿದ್ದಾರೆ.
ಮೂಲ ಯೋಜನೆಯಂತೆ ಬಯಲು ಸೀಮೆಗೆ ಹರಿಯಬೇಕಿದ್ದ ನೀರು, ಹೇಮಾವತಿ ನದಿಗೆ ಹರಿಯುತ್ತಿದೆ.
ಮಳೆಗಾಲದಲ್ಲಿ ಭರ್ತಿಯಾಗಿರುವ ಎತ್ತಿನಹೊಳೆ ಚೆಕ್ ಡ್ಯಾಮ್‌ಗಳು ಕಳೆದ ಬಾರಿ ಗುರುತ್ವಾಕರ್ಷಣೆಯ ಮೂಲಕ ವಾಣಿ ವಿಲಾಸ ಡ್ಯಾಂಗೆ ಹರಿದಿತ್ತು. ಈ ಬಾರಿ ವಾಣಿ ವಿಲಾಸ ಡ್ಯಾಂ ಕೂಡ ಭರ್ತಿಯಾಗಿರುವ ಹಿನ್ನಲೆ, ಅಧಿಕಾರಿಗಳು ಹೇಮಾವತಿ ನದಿಗೆ ನೀರು ಹರಿಸಲೇಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಈ ಘಟನೆಯಿಂದ ಅರಬ್ಬಿ ಸಮುದ್ರದ ಬದಲು ಬಂಗಾಳ ಕೊಲ್ಲಿಗೆ ನೀರು ಸೇರುತ್ತಿದೆ.
ಹೇಮಾವತಿ ನದಿ ನೀರು ಹರಿಯುವ ಪ್ರದೇಶದಲ್ಲಿ ರಸ್ತೆ ಕೊಚ್ಚಿ ಹೋಗಿ ಅವಾಂತರ ಸೃಷ್ಟಿಯಾದ ಘಟನೆ ಸಕಲೇಶಪುರ ತಾಲೂಕಿನ ದೊಡ್ಡನಾಗರ ಗ್ರಾಮದಲ್ಲಿ ನಡೆದಿದೆ. ಇದ್ದ ಒಂದು ರಸ್ತೆಯನ್ನು ಕಳೆದಯಕೊಂಡು ಗ್ರಾಮಸ್ಥರು ಪರದಾಡುತ್ತಿದ್ದಾರೆ.