ಬೆಂಗಂಳೂರು: ಹಳದಿ ಮೆಟ್ರೋ ಶೀಘ್ರದಲ್ಲೇ ಹಳಿ ಹತ್ತಲಿದ್ದು, ರೈಲ್ವೆ ಸುರಕ್ಷತಾ ಆಯೋಗದಿಂದ ಈಗಾಗಲೆ ಹಸಿರು ನಿಶಾನೆ ತೋರಿದೆ.
ಹಳದಿ ಮೆಟ್ರೋ ಮಾರ್ಗವನ್ನು ಆಗಸ್ಟ್ 15ರಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದ ನಡುವಿನ 19.15 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗವನ್ನು ಜುಲೈ 22 ರಂದು ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿ, ವಿದ್ಯುತ್ ಸರಬರಾಜು ವ್ಯವಸ್ಥೆ, ಸಿಗ್ನಲಿಂಗ್, ಹಳಿಗಳು ಮತ್ತು ವಯಾಡಕ್ಟ್‌ಗಳ ಸುರಕ್ಷತಾ ಪರೀಕ್ಷಿಸಿದ್ದಾರೆ.
ಮೂರು ಚಾಲಕರಹಿತ ರೈಲುಗಳು ಹಳದಿ ಮಾರ್ಗದಲ್ಲಿ ಸುಮಾರು 20 ನಿಮಿಷಗಳ ಅಂತರದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್, ಎಚ್‌ಎಸ್‌ಆರ್ ಲೇಔಟ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಹಾದು ಹೋಗಲಿರುವ ಮೆಟ್ರೋ ಸದ್ಯ ನಾಲ್ಕು ಮೆಟ್ರೋ ಬೋಗಿಗಳು BMRCL ಬಳಿ ಇವೆ. ಉಳಿದ ಮೆಟ್ರೋ ಬೋಗಿಗಳು ವಾರದೊಳಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



















