ಹಾವೇರಿ : ವಕ್ಪ್ ವಿಚಾರದಲ್ಲಿ ನಾನು ಸೇರಿದಂತೆ ಅಡ್ಜಸ್ಟ್ಮೆಂಟ್ ಇರಲಾರದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಲಾಗಿದೆ. ಡಿಕೆಶಿ ಭಿಕ್ಷೆಯಿಂದ ಶಾಸಕ ಆದವರ ಮೇಲೆ ಕೇಸ್ ದಾಖಲಾಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇದು ಸಾಬರ ಸರ್ಕಾರ, ಹಿಂದೂಗಳದ್ದಲ್ಲ. ಅವರಿಗೆ ಕೋರ್ಟ್ ಇಲ್ಲ. ಡಿಸಿ, ಎಸಿ ಸಿವಿಲ್ ಯಾವ ಕೋರ್ಟ್ ಇಲ್ಲ. ಅವರದೇ ಟ್ರಿಬ್ಯುನಲ್ ಇದೆ. ಅಲ್ಲಿ ಜಡ್ಜ್ ಕೂಡಾ ಸಾಬನೇ. ಅವರೇ ನಿರ್ಣಯ ಮಾಡೋರು. ಇದು ಅಲ್ಲಾನ ಜಾಗ ಅಂತ ಜಮೀರ್ ಹೇಳ್ತಾನೆ. ಅಲ್ಲಾ ಯಾವಾಗ ಭಾರತಕ್ಕೆ ಬಂದ? ಚೆನ್ನಕೇಶವ, ಸೋಮೇಶ್ವರ ದೇವಾಲಯ ಅವರದಾ? ಕಾಗಿನೆಲೆ ಊರೇ ವಕ್ಪ್ ಮಾಡಿದ್ದಾರೆ. ಕಡಕೋಳ ಮೂರು ದೇವಸ್ಥಾನ ವಕ್ಪ್ ಅಂತಿದ್ದಾರೆ. ಇವರಿಗೆ ಬಂದು ಅಲ್ಲಾ ಯಾವಾಗ ಕೊಟ್ಟಿದ್ದಾನೆ? ಎಂದು ಪ್ರಶ್ನಿಸಿ ಗುಡುಗಿದ್ದಾರೆ.
ಮಣ್ಣು ಮಾಡಲು, ನಮಾಜ್ ಮಾಡಲು ಜಾಗ ಕೊಟ್ಟರೆ ಇಡೀ ಸರ್ವೆ ನಂಬರ್ ನಮ್ಮದು ಅಂತಾರೆ. ಸಣ್ಣ ಕಲ್ಲು ಇದ್ದರೂ ಸುಣ್ಣ ಹೊಡೆದು ಆ ಜಾಗಕ್ಕೆ ಚಾದರ ಹಾಕಿ ನಮ್ಮದು ಅಂತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಯತ್ನಾಳ್ ಕ್ಷಮೆ ಕೇಳಲಿ ಎಂಬ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನೇಕೆ ಕ್ಷಮೆ ಕೇಳಬೇಕು. ಬೇಕಾದರೆ ಕೇಸ್ ಹಾಕಲಿ. ಇಂಡಿ ತಾಲೂಕಿನಲ್ಲಿ ಒಂದು ಊರನ್ನೇ ವಕ್ಪ್ ಮಾಡಿದಾರೆ ಎಂದು ಗುಡುಗಿದ್ದಾರೆ.