ಬೆಂಗಳೂರು: ವಕ್ಫ್ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಬಣ ಈಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದೆ.
ಸದ್ಯ 2ನೇ ಹಂತದ ಹೋರಾಟದಲ್ಲಿರುವ ಬಣ, ಹೋರಾಟವನ್ನು(protest) ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದೆ. ಭೇಟಿ ನೀಡದ ಜಿಲ್ಲೆಗಳಿಗೂ ತೆರಳಿ ಆ ಜಿಲ್ಲೆಗಳಲ್ಲಿ ಹೋರಾಟ ನಡೆಸಿ ವರದಿ ಸಂಗ್ರಹಿಸುವುದಕ್ಕೆ ನಿರ್ಧಾರ ಮಾಡಲಾಗಿದೆ.
ಈ ವೇಳೆ ಮಾತನಾಡಿರುವ ಯತ್ನಾಳ್, ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. 3ನೇ ಹಂತದ ಹೋರಾಟವನ್ನೂ ಮಾಡುತ್ತೇವೆ. ವಕ್ಫ್ ಬೋರ್ಡ್ ಕಿತ್ತು ಹಾಕುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಗುಡುಗಿದ್ದಾರೆ.
ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ(BY Vijayendra) ಮತ್ತೊಮ್ಮೆ ರಾಜ್ಯಾಧ್ಯಕ್ಷರಾಗುವ ಪ್ರಯತ್ನದಲ್ಲಿದ್ದು, ಪಕ್ಷ ಸಂಘಟನೆಯತ್ತ ಬ್ಯೂಸಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ, ರೆಬೆಲ್ಸ್ ಬಣ ಹಾಗೂ ವಿಜಯೇಂದ್ರ ಬಣಗಳ ಮಧ್ಯೆ ಪೈಪೋಟಿ ನಡೆಯುವುದಂತೂ ಖಚಿತ ಎನ್ನಲಾಗುತ್ತಿದೆ.