ಬೆಂಗಳೂರು | ಹಲವು ಸಿನಿಮಾಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಅಭಿನಯಿಸಿ ಖ್ಯಾತಿ ಗಳಿಸಿದ್ದ ಹರೀಶ್ ರಾಯ್ ಅವರು ಇಂದು ವಿಧಿವಶರಾಗಿದ್ದಾರೆ. ಹರೀಶ್ ರಾಯ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದ್ದು, ಹಲವಾರು ಸಿನಿ ಗಣ್ಯರು ಹರೀಶ್ ರಾಯ್ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಇದೀಗ ನಟ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ತಮ್ಮ KGF ಸಿನಿಮಾದ “ಚಾಚ” ಹರೀಶ್ ರಾಯ್ ಅವರ ಅಂತಿಮ ದರ್ಶನ ಪಡೆದಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹರೀಶ್ ರಾಯ್ ಅವರಿಗೆ ನಟ ಯಶ್ ಈ ಹಿಂದೆ ಆರ್ಥಿಕ ಸಹಾಯ ಯಶ್ ಕೂಡ ಮಾಡಿದ್ದಾರೆ. ಹಾಗಂತ ಯಶ್ ಅದನ್ನ ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ, ಹರೀಶ್ ರಾಯ್ ಅದನ್ನ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಮತ್ತೆ ಮತ್ತೆ ಕೇಳೋದು ಎಷ್ಟು ಸರಿ. ಅದರಿಂದ ಸ್ನೇಹ ಹಾಳಾಗಿ ಹೋಗುತ್ತದೆ ಅಂತಲೇ ಹೇಳಿದ್ದರು. ಇದೀಗ ಅದೇ ಸ್ನೇಹಿತನ ಅಂತಿಮ ದರ್ಶನಕ್ಕೆ ರಾಕಿ ಭಾಯ್ ಬಂದಿದ್ದಾರೆ.

ಇನ್ನು, ನಟ ಯಶ್ ಹರೀಶ್ ರಾಯ್ ಅವರ ಅಂತಿಮ ದರ್ಶನದ ವೇಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ನೆರವಿನ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
ನಾಳೆ ಉಡುಪಿಯಲ್ಲಿ ಅಂತ್ಯಕ್ರಿಯೆ
ಬೆಂಗಳೂರಿನಲ್ಲಿ ವಾಸವಾಗಿದ್ದ ಹರೀಶ್ ರಾಯ್ ಅವರು ಮೂಲತಃ ಉಡುಪಿಯ ಅಂಬಲಪಾಡಿಯವರು.ಹೀಗಾಗಿ ಹುಟ್ಟೂರಿನಲ್ಲಿಯೇ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ. ಅಂತ್ಯಕ್ರಿಯೆಯ ಎಲ್ಲ ವೆಚ್ಚವನ್ನು ನಟ ಧ್ರುವ ಸರ್ಜಾ ನೀಡುತ್ತಿದ್ದು, ಅವರ ಕುಂಟುಬದ ನೆರವಿಗೆ ನಿಂತಿದ್ದಾರೆ.
ಸದ್ಯ ಹರೀಶ್ ರಾಯ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿರುವ ಅಂಜನಾಪುರದಲ್ಲಿರುವ ಮನೆಯ ಬಳಿ ಎರಡು ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಮಧ್ಯಾಹ್ನದ ಬಳಿಕ ಉಡುಪಿಗೆ ಪಾರ್ಥಿವ ಶರೀರ ರವಾನೆ ಆಗಲಿದೆ. ಶುಕ್ರವಾರ ಉಡುಪಿಯಲ್ಲಿ ಹರೀಶ್ ರಾಯ್ ಅಂತ್ಯ ಸಂಸ್ಕಾರ ನಡೆಯಲಿದೆ.
ಇದನ್ನೂ ಓದಿ : ಫಿಲಿಪೈನ್ಸ್ನಲ್ಲಿ ಭೀಕರ ಚಂಡಮಾರುತ | 114 ಮಂದಿ ಸಾವು, ಹಲವರು ನಾಪತ್ತೆ



















