ಮಹಿಳಾ ಪ್ರೀಮಿಯರ್ ಲೀಗ್ 2025ರ ((WPL 2025) ) ವೇಳಾಪಟ್ಟಿ ಗುರುವಾರ ಪ್ರಕಟಗೊಂಡಿದೆ. ಫೆಬ್ರವರಿ 14 ರಿಂದ ಆರಂಭವಾಗುವ ಟೂರ್ನಿಯು ಮಾರ್ಚ್ 15ರಂದು ಕೊನೆಗೊಳ್ಳಲಿದೆ. ಈ ಬಾರಿ ವಡೋದರ, ಬೆಂಗಳೂರು, ಲಖನೌ ಹಾಗೂ ಮುಂಬೈ ಸೇರಿ ನಾಲ್ಕು ತಾಣಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ಇಷ್ಟೊಂದು ಜಾಗದಲ್ಲಿ ಪಂದ್ಯಗಳನ್ನು ನಿಯೋಜಿಸಿದ್ದು ಇದೇ ಮೊದಲು ಎನ್ನಲಾಗಿದೆ.
ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದೇ ಮೊದಲ ಬಾರಿ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯು ನಾಲ್ಕು ನಗರಗಳಲ್ಲಿ ನಡೆಯಲಿದೆ.
ಕಳೆದ ವರ್ಷದ ಟೂರ್ನಿಯ ಮೊದಲ ಚರಣದ ಪಂದ್ಯಗಳಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ವಡೋದರದ ಕೊಟಂಬಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಮಹಿಳಾ ಒಡಿಐ ಸರಣಿ ನಡೆದಿತ್ತು. ಅಲ್ಲಿ ಈ ಬಾರಿ ಮಹಿಳೆಯರ ಪ್ರೀಮಿಯರ್ ಲೀಗ್ ಆಯೋಜನೆಗೊಂಡಿದೆ.
ಲಖನೌದ ಏಕನಾ ಸ್ಟೇಡಿಯಂನಲ್ಲಿ ಅಲೀಸಾ ಹೀಲಿ ನಾಯಕತ್ವದ ಯುಪಿ ವಾರಿಯರ್ಸ್ ಮಾರ್ಚ್ 3 ರಿಂದ ಮೂರು ಪಂದ್ಯಗಳನ್ನು ಆಡಲಿದೆ. ಇನ್ನು ಮುಂಬೈನ ದಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಮೈದಾನದಲ್ಲಿ ಟೂರ್ನಿಯ ಕೊನೆಯ ಲೆಗ್ ಪಂದ್ಯಗಳು ಜರುಗಲಿವೆ. ಎರಡು ಪ್ಲೇಆಫ್ ಪಂದ್ಯಗಳ ಜೊತೆಗೆ ಮಾರ್ಚ್ 15 ರಂದು ಫೈನಲ್ ಹಣಾಹಣಿ ನಡೆಯಲಿದೆ. ಮಾರ್ಚ್ 13 ರಂದು ಎಲಿಮಿನೇಟರ್ ಪಂದ್ಯ ಆಯೋಜನೆಗೊಂಡಿದೆ. .
2023ರ ಚಾಂಪಿಯನ್ಸ್ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೆಬ್ರವರಿ 15 ರಂದು ಮುಖಾಮುಖಿಯಾಗಲಿವೆ. ಕೊನೆಯ ಬಾರಿ ಆರ್‌ಸಿಬಿ ಎದುರು ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಸೋತಿತ್ತು. ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಇನ್ನೂ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳ ವಿವರ
ಫೆಬ್ರವರಿ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜಯಂಟ್ಸ್ (ವಡೋದರ)
ಫೆಬ್ರವರಿ 17: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ (ವಡೋದರ)
ಫೆಬ್ರವರಿ 21: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ (ಬೆಂಗಳೂರು)
ಫೆಬ್ರವರಿ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್ (ಬೆಂಗಳೂರು)
ಫೆಬ್ರವರಿ 27: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜಯಂಟ್ಸ್ (ಬೆಂಗಳೂರು)
ಮಾರ್ಚ್ 01: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ (ಬೆಂಗಳೂರು)