ಐಸಿಸಿಯು ಮಹಿಳಾ ಟಿ20 ವಿಶ್ವಕಪ್ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಅಕ್ಟೋಬರ್ 3 ರಿಂದ ಟೂರ್ನಿ ಆರಂಭವಾಗಲಿದೆ. ಮಹಿಳೆಯರ ಟಿ20 ವಿಶ್ವಕಪ್ ನ್ನು ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಅಲ್ಲಿನ ಪರಿಸ್ಥಿತಿ ಸರಿ ಇಲ್ಲದ ಹಿನ್ನೆಲೆಯಲ್ಲಿ ಈ ಚುಟುಕು ಸಮರವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ವರ್ಗಾಯಿಸಲಾಯಿತು. ಹೀಗಾಗಿ ಈ ಪಂದ್ಯಗಳು ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಮತ್ತು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.
ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ಮಹಿಳಾ ತಂಡವು ಅಕ್ಟೋಬರ್ 4 ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಆ ನಂತರ ಅಕ್ಟೋಬರ್ 6 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಫೈಟ್ ನಡೆಯಲಿದೆ. ಈ ಬಾರಿ ಒಟ್ಟು 10 ತಂಡಗಳು 23 ಪಂದ್ಯಗಳನ್ನಾಡಲಿವೆ. ಈ ಪಂದ್ಯಾವಳಿಯು ಅಕ್ಟೋಬರ್ 3 ರಿಂದ ಆರಂಭವಾಗಲಿದ್ದು, ಅಕ್ಟೋಬರ್ 20 ರವರೆಗೆ ನಡೆಯಲಿದೆ.
ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ತಂಡಗಳಿವೆ. ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ತಂಡಗಳನ್ನು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಎರಡೂ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಅ. 20ರಂದು ಫೈನಲ್ ಪಂದ್ಯ ನಡೆಯಲಿವೆ.
ಅಕ್ಟೋಬರ್ 3, ಗುರುವಾರ ಬಾಂಗ್ಲಾದೇಶ vs ಸ್ಕಾಟ್ಲೆಂಡ್ ಬಿ ಮಧ್ಯಾಹ್ನ 3:30 ಶಾರ್ಜಾ
ಅಕ್ಟೋಬರ್ 3, ಗುರುವಾರ ಪಾಕಿಸ್ತಾನ vs ಶ್ರೀಲಂಕಾ ಎ ಸಂಜೆ 7:30 ಶಾರ್ಜಾ
ಅಕ್ಟೋಬರ್ 4, ಶುಕ್ರವಾರ ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ ಬಿ ಮಧ್ಯಾಹ್ನ 3:30 ದುಬೈ
ಅಕ್ಟೋಬರ್ 4, ಶುಕ್ರವಾರ ಭಾರತ vs ನ್ಯೂಜಿಲ್ಯಾಂಡ್ ಎ ಸಂಜೆ 7:30 ದುಬೈ
ಅಕ್ಟೋಬರ್ 5, ಶನಿವಾರ ಬಾಂಗ್ಲಾದೇಶ vs ಇಂಗ್ಲೆಂಡ್ ಬಿ ಮಧ್ಯಾಹ್ನ 3:30 ಶಾರ್ಜಾ
ಅಕ್ಟೋಬರ್ 5, ಶನಿವಾರ ಆಸ್ಟ್ರೇಲಿಯಾ vs ಶ್ರೀಲಂಕಾ ಎ ಸಂಜೆ 7:30 ಶಾರ್ಜಾ
ಅಕ್ಟೋಬರ್ 6, ಭಾನುವಾರ ಭಾರತ vs ಪಾಕಿಸ್ತಾನ ಎ ಮಧ್ಯಾಹ್ನ 3:30 ದುಬೈ
ಅಕ್ಟೋಬರ್ 6, ಭಾನುವಾರ ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ ಎ ಸಂಜೆ 7:30 ದುಬೈ
ಅಕ್ಟೋಬರ್ 7, ಸೋಮವಾರ ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಬಿ ಸಂಜೆ 7:30 ಶಾರ್ಜಾ
ಅಕ್ಟೋಬರ್ 8, ಮಂಗಳವಾರ ಆಸ್ಟ್ರೇಲಿಯಾ vs ನ್ಯೂಜಿಲೆಂಡ್ ಎ ಸಂಜೆ 7:30 ಶಾರ್ಜಾ
ಅಕ್ಟೋಬರ್ 9, ಬುಧವಾರ ದಕ್ಷಿಣ ಆಫ್ರಿಕಾ vs ಸ್ಕಾಟ್ಲೆಂಡ್ ಬಿ ಮಧ್ಯಾಹ್ನ 3:30 ದುಬೈ
ಅಕ್ಟೋಬರ್ 9, ಬುಧವಾರ ಭಾರತ vs ಶ್ರೀಲಂಕಾ ಎ ಸಂಜೆ 7:30 ದುಬೈ
ಅಕ್ಟೋಬರ್ 10, ಗುರುವಾರ ಬಾಂಗ್ಲಾದೇಶ vs ವೆಸ್ಟ್ ಇಂಡೀಸ್ ಬಿ ಸಂಜೆ 7:30 ಶಾರ್ಜಾ
ಅಕ್ಟೋಬರ್ 11, ಶುಕ್ರವಾರ ಆಸ್ಟ್ರೇಲಿಯಾ vs ಪಾಕಿಸ್ತಾನ ಎ ಸಂಜೆ 7:30 ದುಬೈ
ಅಕ್ಟೋಬರ್ 12, ಶನಿವಾರ ನ್ಯೂಜಿಲ್ಯಾಂಡ್ vs ಶ್ರೀಲಂಕಾ ಎ ಮಧ್ಯಾಹ್ನ 3:30 ಶಾರ್ಜಾ
ಅಕ್ಟೋಬರ್ 12, ಶನಿವಾರ ಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾ ಬಿ ಸಂಜೆ 7:30 ದುಬೈ
ಅಕ್ಟೋಬರ್ 13, ಭಾನುವಾರ ಇಂಗ್ಲೆಂಡ್ vs ಸ್ಕಾಟ್ಲೆಂಡ್ ಬಿ ಮಧ್ಯಾಹ್ನ 3:30 ಶಾರ್ಜಾ
ಅಕ್ಟೋಬರ್ 13, ಭಾನುವಾರ ಭಾರತ vs ಆಸ್ಟ್ರೇಲಿಯಾ ಎ ಸಂಜೆ 7:30 ಶಾರ್ಜಾ
ಅಕ್ಟೋಬರ್ 14, ಸೋಮವಾರ ಪಾಕಿಸ್ತಾನ vs ನ್ಯೂಜಿಲ್ಯಾಂಡ್ ಎ ಸಂಜೆ 7:30 ದುಬೈ
ಅಕ್ಟೋಬರ್ 15, ಮಂಗಳವಾರ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಬಿ ಸಂಜೆ 7:30 ದುಬೈ
ಅಕ್ಟೋಬರ್ 17, ಗುರುವಾರ ಸೆಮಿಫೈನಲ್ 1 ಸಂಜೆ 7:30 ದುಬೈ
ಅಕ್ಟೋಬರ್ 18, ಶುಕ್ರವಾರ ಸೆಮಿಫೈನಲ್ 2 ಸಂಜೆ 7:30 ಶಾರ್ಜಾ
ಅಕ್ಟೋಬರ್ 20, ಭಾನುವಾರ ಫೈನಲ್ ಸಂಜೆ 7:30 ದುಬೈ