ಬೆಂಗಳೂರಿನಲ್ಲಿ ನಡೆದ 2025ರ ಮಹಿಳಾ ಪ್ರೀಮಿಯರ್ ಲೀಗ್ ಮಿನಿ ಹರಾಜು ಪ್ರಕ್ರಿಯೆ ಅಂತ್ಯವಾಗಿದ್ದು, 120 ಆಟಗಾರ್ತಿಯರ ಪೈಕಿ 19 ಆಟಗಾರ್ತಿಯರು ಸೇಲ್ ಆಗಿದ್ದಾರೆ.
ಅಲ್ಲದೇ, ಈ ಪೈಕಿ ನಾಲ್ವರು ಆಟಗಾರ್ತಿಯರು ಒಂದು ಕೋಟಿ ರೂ. ಅಧಿಕ ಬೆಲೆಗೆ ಮಾರಾಟವಾಗುವ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಅನ್ ಕ್ಯಾಪ್ಡ್ ಭಾರತೀಯರಾದ ಸಿಮ್ರಾನ್ ಶೇಖ್ 1. 90 ಕೋಟಿ ರೂ. ಗುಜರಾತ್ ಜೈಂಟ್ಸ್ ತಂಡ ಸೇರಿದ್ದಾರೆ. ಮುಂಬೈ ಇಂಡಿಯನ್ಸ್ 16 ವರ್ಷದ ಜಿ ಕಮಲಿನಿ 1.60 ಕೋಟಿ ರೂ. ಮುಂಬೈ ಇಂಡಿಯನ್ಸ್ ಸೇರಿದ್ದಾರೆ. ಪ್ರೇಮಾ ರಾವತ್ 1.2 ಕೋಟಿ ರೂ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ. ಡಿಯಾಂಡ್ರಾ ಡಾಟಿನ್ 1.7 ಕೋಟಿ ರೂ. ಗೆ ಗುಜರಾತ್ ಪಾಲಾಗಿದ್ದಾರೆ. ಇನ್ನುಳಿದಂತೆ ಬಹುತೇಕ 10 ಲಕ್ಷ ರೂ.ಗೆ ವಿವಿಧ ತಂಡಗಳನ್ನು ಸೇರಿದ್ದಾರೆ.