ಬೆಂಗಳೂರು: ಐಎಎಸ್ ಅಧಿಕಾರಿಯೆಂದು ಹೇಳಿಕೊಂಡು ವ್ಯಕ್ತಿಯೊಬ್ಬ ಹಲವಾರು ಮಹಿಳೆಯರಿಗೆ ವಂಚಿಸಿರುವ ಘಟನೆ ನಡೆದಿದೆ.
ಮ್ಯಾಟ್ರಿಮೋನಿಯಲ್ಲಿ (Matrimony) ಐಎಎಸ್ (IAS) ಅಧಿಕಾರಿ ಎಂದು ಹೇಳಿಕೊಂಡು ಜೀವನ್ ಕುಮಾರ್ ಎಂಬಾತ ವಂಚಿಸಿದ್ದಾನೆ. ಈತ ಪರಿಚಯಸ್ಥ ಮಹಿಳೆಯರಿಗೆ ಐಎಎಸ್, ಐಪಿಎಸ್ ಆಗಿರುವುದಾಗಿ ಹೇಳುತ್ತಿದ್ದ. ಆನಂತರ ಖಾಸಗಿ ಫೋಟೊ ಹಾಗೂ ವಿಡಿಯೋ ಪಡೆಯುತ್ತಿದ್ದ. ಆನಂತರ ತಾಯಿಗೆ ಕ್ಯಾನ್ಸರ್ ಇದೆ ಅಂತಾ ಹೇಳಿ ಚಿಕಿತ್ಸೆಗೆ ಹಣ ಬೇಕು ಹಾಗೂ ಟ್ರಬಲ್ ಇದೆ ಎಂದು ಹೇಳಿ ಹಣ ಪಡೆಯುತ್ತಿದ್ದ. ಮೊದಲು 3 ಲಕ್ಷ ಹಣ ಪಡೆದು, ಮತ್ತೆ 5 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ.
ಹಣ ಕೊಡದೇ ಹೋದರೆ ಖಾಸಗಿ ಫೋಟೊ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹೆದರಿಸುತ್ತಿದ್ದ ಎನ್ನಲಾಗಿದೆ. ಹೀಗೆ ಸುಮಾರು 20ಕ್ಕೂ ಅಧಿಕ ಮಹಿಳೆಯರಿಗೆ ವಂಚಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ಮಹಿಳೆಯೊಬ್ಬರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.