ಕೋಲಾರ : ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಮಹಿಳೆಯನ್ನು ಗರ್ಭಿಣಿ ಮಾಡಿ ಕೈಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಿಯಕರನ ಮನೆ ಮುಂದೆ ಯುವತಿ ಪ್ರತಿಭಟನೆಯನ್ನು ಮುಂದುವರಿಸಿದ್ದಾಳೆ.
ಕೋಲಾರದ ಶ್ರೀನಿವಾಸಪುರ ಪಟ್ಟಣದಲ್ಲಿ ಗರ್ಭಿಣಿ ಮಹಿಳೆ ಪ್ರತಿಭಟನೆ ನಡೆಸುತ್ತಿದ್ದು, ಶ್ರೀನಿವಾಸಪುರ ಪಟ್ಟಣದ ಸುಭಾಶ್ ನಗರದ ಅಮರ್ ನಾಥ್ ಎಂಬಾತನನ್ನು ಪ್ರೀತಿಸಿ ಮಹಿಳೆ ವಂಚನೆಗೊಳಗಾಗಿದ್ದಾಳೆ ಎನ್ನಲಾಗಿದೆ.
ಕೋಲಾರದ ಗಾಂಧಿನಗರ ನಿವಾಸಿ ಸಂಯುಕ್ತ ಎನ್ನುವ ಯುವತಿಗೆ ವಂಚನೆಯಾಗಿದ್ದು, ನ್ಯಾಯಕ್ಕಾಗಿ ಪ್ರತಿಭಟನೆಗಿಳಿದಿದ್ದಾಳೆ. ಗಂಡನನ್ನ ಬಿಟ್ಟು, ಗಂಡನ ಸ್ನೇಹಿತನನ್ನ ಪ್ರೀತಿಸಿ ಮೋಸ ಹೋಗಿರುವ ಮಹಿಳೆ ಸಂಯುಕ್ತ, ಕಳೆದ 3 ವರ್ಷದಿಂದ ಪ್ರೀತಿಸಿ, ಇದೀಗ ಸಂಯುಕ್ತ 6 ತಿಂಗಳ ಗರ್ಭಿಣಿಯಾಗಿದ್ದಾಳೆ. ಸದ್ಯ ಪ್ರಿಯಕರ ಅಮರನಾಥ್ ಮನೆ ಎದುರು ಅಂಬೇಡ್ಕರ್ ಪೊಟೊ ಇರಿಸಿ, ತಮಟೆ ವಾದ್ಯದ ಸಮೇತ ಪ್ರತಿಭಟನೆ ಮುಂದುವರಿಸಿದ್ದಾಳೆ.