ಬಾಗಲಕೋಟೆ: ವರುಣಾರ್ಭಟಕ್ಕೆ ಹಲವೆಡೆ ಜನ- ಜೀವನ ಅಸ್ತವ್ಯಸ್ಥ ಉಂಟಾಗುತ್ತಿದೆ. ಹಲವೆಡೆ ಬೆಳೆದ ಬೆಳೆಗಳು ಅಕಾಲಿಕ ಮಳೆಗೆ ನೆಲ ಕಚ್ಚುತ್ತಿವೆ. ಹಲವೆಡೆ ಗುಡುಗು-ಮಿಂಚಿನ ಮಳೆಯಾಗುತ್ತಿದೆ.
ಜಿಲ್ಲೆಯಲ್ಲಿ ಸಿಡಿಲು ಬಡಿದು ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಿಡಿಲು ಬಡಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಭಾರತಿ (41) ಮೃತ ಮಹಿಳೆ ಎನ್ನಲಾಗಿದೆ. ಬಾಗಲಕೋಟೆ ತಾಲೂಕಿನ ಬೋಡನಾಯದಿನ್ನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.



















