ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಇಲ್ಲಿಯ ಆಡುಗೋಡಿಯ (Adugodi) ನಂಜಪ್ಪ ಲೇಔಟ್ ನಲ್ಲಿ ನಡೆದಿದೆ.
ಹೇಮಾ (44) ಸಾವನ್ನಪ್ಪಿರುವ ಮಹಿಳೆ. ಈಗ ಪತಿಯ ವಿರುದ್ಧ ಕೊಲೆಯ ಆರೋಪ ಕೇಳಿ ಬಂದಿದೆ. ಪತಿಗೆ ಅಕ್ರಮ ಸಂಬಂಧ ಇದೆ. ಮನೆ ಸಮೀಪವೇ ಬೇರೆ ಮಹಿಳೆಗೂ ಮನೆ ಮಾಡಿಕೊಟ್ಟಿದ್ದ ಎಂದು ಮಹಿಳೆ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಇದರಿಂದಾಗಿ ಹೇಮಾ ವಿಷ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಕ್ರಮ ಸಂಬಂಧದ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಶನಿವಾರ ಹೇಮಾ ಸಾವನ್ನಪ್ಪಿದ್ದು, ಮಗಳ ವಿದ್ಯಾಭ್ಯಾಸದ ವಿಚಾರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗಂಡ ಹೇಳಿದ್ದ. ಆದರೆ, ಹೇಮಾ ಕುಟುಂಬಸ್ಥರು ಮಾತ್ರ ಕೊಲೆಯ ಆರೋಪ ಮಾಡಿದ್ದಾರೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.