ಚಿಕ್ಕಮಗಳೂರು : ಕಾಲಭೈರವೇಶ್ವನ ಸನ್ನಿಧಿಯ ಎದುರು ವಾಮಾಚಾರ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿ ನಡೆದಿದ್ದು, ಯುಗಾದಿಯ ಹಬ್ಬದ ದಿನವೇ ಕಿಡಿಗೇಡಿಗಳ ಕೃತ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ಧಾರೆ.
ಅಮಾವಾಸ್ಯೆ ಹಿನ್ನೆಲೆ ಕಳೆದ ರಾತ್ರಿ ದುಷ್ಕರ್ಮಿಗಳು ದೇವರ ಗುಡಿ ಎದುರೇ ವಾಮಾಚಾರ ನಡೆಸಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಮುಂಭಾಗ ದೊಡ್ಡ ದೊಡ್ಡ ಕಲ್ಲುಗಳನ್ನ ವೃತ್ತಾಕಾರದಲ್ಲಿ ಇಟ್ಟು ಅದರ ಮಧ್ಯೆ ವಾಮಾಚಾರ ನಡೆಸಿದ್ದಾರೆ. ಅರಿಶಿನ-ಕುಂಕುಮ, ನಿಂಬೆಹಣ್ಣು, ತೆಂಗಿನಕಾಯಿ, ಕುಂಬಳಕಾಯಿ ಹಾಗೂ ನಾಣ್ಯಗಳನ್ನು ಕೃತ್ಯಕ್ಕೆ ಬಳಸಿದ್ದಾರೆ.
ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಳಸದ ಕಳಸೇಶ್ವರ ಸ್ವಾಮಿ ದೇವಸ್ಥಾನಕ್ಕೆ ಒಳಪಡುವ ಈ ಕಾಲಭೈರವನ ಗುಡಿ ಅತ್ಯಂತ ಪುರಾತನವಾದದ್ದು. ಪ್ರತಿ ವರ್ಷ ಕಳಸೇಶ್ವರ ದೇವಸ್ಥಾನದ ಗಿರಿಜಾಕಲ್ಯಾಣ ರಥ ಇದೇ ಮಾರ್ಗವಾಗಿ ಸಾಗುತ್ತದೆ. ಕಳೆದ ವರ್ಷ ಕೂಡ ಯುಗಾದಿಯ ಹಿಂದಿನ ದಿನ ಇದೇ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ಈಗ ಹಬ್ಬದ ದಿನವೇ ಜನವಸತಿ ಇರುವ ಪ್ರದೇಶದಲ್ಲಿ, ಅದರಲ್ಲೂ ನಿತ್ಯ ನೂರಾರು ಜನ ಓಡಾಡುವ ಜಾಗದಲ್ಲಿ ಇಂತಹ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ : ಕೆಕೆಆರ್ ಪಾಳಯಕ್ಕೆ ಮರಳಿದ 2012ರ ‘ಐಪಿಎಲ್ ಹೀರೋ’ ಮನ್ವಿಂದರ್ ಬಿಸ್ಲಾ!



















