ಪಾಕಿಸ್ತಾನ್ ವಿರುದ್ಧದ ಪ್ರತೀಕಾರಕ್ಕೆ ಇಂದೇ ಮುಹೂರ್ತ ನಿಗದಿಯಾಗುತ್ತಾ? ಎಂಬ ಪ್ರಶ್ನೆ ಮೂಡುತ್ತಿದೆ. ಕೆಲವೇ ಕ್ಷಣಗಳಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಹೀಗಾಗಿ ಪಾಕಿಸ್ತಾನಕ್ಕೆ ಯುದ್ಧದ ಭೀತಿ ಶುರುವಾಗಿದೆ.
ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ಥಾನದ ಕೈಗಳಿರುವುದು ದೃಢವಾಗಿರುವ ಬೆನ್ನಲ್ಲೇ ಭಾರತದ ಮುಂದಿನ ನಡೆ ಇದೀಗ ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ, ಮೋದಿ ಮತ್ತು ರಾಜನಾಥ್ ಭೇಟಿಯೂ ತೀವ್ರ ಕುತೂಹಲ ಕೆರಳಿಸಿದೆ. ನಿನ್ನೆಯಷ್ಟೇ ಮನ್ ಕಿ ಬಾತ್ ನಲ್ಲೂ ಮೋದಿ 26 ಮಂದಿಯ ಸಾವಿಗೆ ಸೂಕ್ತ ನ್ಯಾಯ ದೊರೆಯಲಿದೆ ಎಂದು ಹೇಳಿದ್ದರು. ಹೀಗಾಗಿ ಇಂದಿನ ಸಭೆ ತೀವ್ರ ಮಹತ್ವ ಪಡದಿದೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡಾ ಉಪಸ್ಥಿತರಿರಲಿದ್ದಾರೆ.



















