ಚಿಕ್ಕಬಳ್ಳಾಪುರ : ಅನುಮಾನದಿಂದ ಹೆಂಡತಿಗೆ ಚೂರಿಯಿಂದ ಇರಿದಿರುವ ಘಟನೆ ಚಿಕ್ಕಬಳ್ಳಾಪುರ ನಗರಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೂಜಾ ಗಂಭೀರ ಗಾಯಗೊಂಡಿರುವ ಮಹಿಳೆ. ನಗರದ ವಾಪಸಂದ್ರ ನಿವಾಸಿಯಾಗಿರುವ ಪೂಜಾ (28)ಳ ಮೇಲೆ ಪತಿ ಅಶ್ವತ್ಥ್ ನಾರಾಯಣನಿಂದ ಅನುಮಾನದದಿಂದ ಹಲ್ಲೆ ಮಾಡಿದ್ದಾನೆ.
ಪೂಜಾ ಕಳೆದ ಎರಡು ದಿನಗಳಿಂದ ಪೊಲೀಸರ ಗಮನಕ್ಕೆ ತಂದಿದ್ದಳು. ಗಂಡ ಹೆಂಡತಿಗೆ ರಾಜಿ ಮಾಡಿ ವಾಪಸ್ ಕಳುಹಿಸಿದ್ದರೂ, ಇಂದು ಏಕಾಏಕಿ ಗಲಾಟೆ ಶರುವಾಗಿ ಚಾಕುವಿನಿಂದ ಕೊಲೆಗೆ ಪತಿ ಯತ್ನಿಸಿದ್ದಾನೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಹಿಳೆ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.