ಹುಬ್ಬಳ್ಳಿ: ಕೋರ್ಟ್ ಆವರಣದಲ್ಲೇ ಪತ್ನಿ ಮತ್ತು ಅತ್ತೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ನಡೆದಿದೆ.
ಕೌಟುಂಬಿಕ ಕಲಹದ ಹಿನ್ನೆಲೆ ದಂಪತಿಗಳಿಬ್ಬರು ವಿವಾಹ ವಿಚ್ಛೇದನಕ್ಕೆ ಸವದತ್ತಿ ಕೋರ್ಟ್ ನಲ್ಲಿಅರ್ಜಿ ಸಲ್ಲಿಸಿದ್ದರು. ಆ ಕಾರಣ ಕೋರ್ಟ್ ಗೆ ಬಂದಿದ್ದ ಪತ್ನಿ ಮತ್ತು ಅತ್ತೆಯ ಮೇಲೆ ಪತಿ ಹಲ್ಲೆ ನಡೆಸಿದ್ದಾನೆ.
ಗಾಯಾಳುಗಳಾದ ಐಶ್ವರ್ಯ ಮತ್ತು ಅವರ ತಾಯಿಯನ್ನು ಕುಟುಂಬಸ್ಥರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಐಶ್ವರ್ಯಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.



















