ಮದುವೆ ಸಂದರ್ಭದಲ್ಲಿ ವಯಸ್ಸು ಮುಚ್ಚಿಟ್ಟ ಹೆಂಡತಿ ವಿರುದ್ಧ ಪತಿ ದೂರು ದಾಖಲಿಸಿರುವ ಘಟನೆ ನಡೆದಿದೆ.
ತನಗಿಂತ ನನ್ನ ಹೆಂಡತಿ ಹೆಚ್ಚು ಹಿರಿಯಳು ಎಂದು ಆರೋಪಿ 34 ವರ್ಷದ ವ್ಯಕ್ತಿ ದೂರು ದಾಖಲಿಸಿದ್ದಾರೆ. ಗುಜರಾತ್ ನಲ್ಲಿ ಈ ಘಟನೆ ನಡೆದಿದೆ. ಅಹ್ಮದಾಬಾದ್ ನ ಸಖೇಜ್ ಎಂಬ ವ್ಯಕ್ತಿಯೊಬ್ಬರ ಪತ್ನಿ ಗರ್ಭ ಧರಿಸಲು ವಿಫಲರಾಗುತ್ತಿದ್ದರು. ಹೀಗಾಗಿ ಪತಿಯು ವೈದ್ಯರ ಬಳಿ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಪತ್ನಿಗೆ 40 ರಿಂದ 42 ವರ್ಷ ವಯಸ್ಸಾಗಿರುವುದರಿಂದ ಸಹಜವಾಗಿ ಗರ್ಭ ಧರಿಸಲು ಸಾಧ್ಯವಿಲ್ಲ ಎಂದು ಆತನಿಗೆ ವೈದ್ಯರು ಹೇಳಿದ್ದಾರೆ.
ಇದನ್ನು ಕೇಳಿ ಆತನಿಗೆ ಆಘಾತವಾಗಿದೆ. ಮದುವೆ ಸಂದರ್ಭದಲ್ಲಿ 32 ವರ್ಷ ಎಂದು ಶಾಲಾ ದಾಖಲೆಗಳನ್ನು ತೋರಿಸಿದ್ದು, ವಾಸ್ತವದಲ್ಲಿ ಆಕೆಗೆ ವಯಸ್ಸಾಗಿರುವುದನ್ನು ಮುಚ್ಚಿಟ್ಟಿದ್ದಾಳೆ. ಹೀಗಾಗಿ ಆತ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ನಂಬಿಕೆ ದ್ರೋಹ ಕೇಸ್ ದಾಖಲಿಸಿದ್ದಾನೆ.