ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಈಗ ಜೈಲಿನಲ್ಲಿದ್ದಾರೆ. ಐಷಾರಾಮಿ ಬದುಕು ಅನುಭವಿಸಿದ ದರ್ಶನ್ ಗೆ ಜೈಲೂಟ ಆರೋಗ್ಯಕ್ಕೆ ಒಗ್ಗುತ್ತಿಲ್ಲ. ಆದರೂ ಅದೇ ಊಟ ಮಾಡಬೇಕಾದ ಸ್ಥಿತಿ ಬಂದಿದೆ.
ಈ ಮಧ್ಯೆ ಜೈಲಿಗೆ ಬಂದು ಬುಧವಾರವಷ್ಟೇ ನಟ ದರ್ಶನ್ ಪತ್ನಿ ಹಾಗೂ ಮಗ ಬಂದು ನೋಡಿ ಹೋಗಿದ್ದಾರೆ. ತಂದೆಯ ಸ್ಥಿತಿ ಕಂಡು ಮಗ ವಿನೀಶ್ ಕಣ್ಣೀರು ಸುರಿಸಿದ್ದಾರೆ. ಜುಲೈ 11ರಂದು ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಸೇರಿದಂತೆ ಕುಟುಂಬಸ್ಥರು ಬಂದು ದರ್ಶನ್ ಅವರನ್ನು ಭೇಟಿ ಮಾಡಿ, ಧೈರ್ಯ ಹೇಳಿದ್ದಾರೆ.
ದರ್ಶನ್ ಭೇಟಿಯಾದಾಗ ವಿಜಯಲಕ್ಷ್ಮಿ ಧೈರ್ಯ ತುಂಬಿದ್ದರು. ಬಟ್ಟೆ, ಹಣ್ಣುಗಳನ್ನು ತಂದಿದ್ದರು. ಜೈಲಿನಲ್ಲಿ ಅಪ್ಪನ ಸ್ಥಿತಿ ಕಂಡು ಮಗ ಕಣ್ಣೀರು ಹಾಕಿದ್ದಾನೆ. ಮಗನನ್ನು ಅಪ್ಪಿಕೊಂಡು ದರ್ಶನ್ ಕೂಡ ಕಣ್ಣೀರು ಹಾಕಿ ಬಾವುಕರಾಗಿದ್ದಾರೆ. ಜೈಲೂಟ ಮಾಡಲು ಆಗುತ್ತಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದಾರೆ. ವಕೀಲರ ಮೂಲಕ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ದರ್ಶನ್ ಗೆ ವಿಜಯಲಕ್ಷ್ಮೀ ಮಾಹಿತಿ ನೀಡಿದ್ದಾರೆ.
ಸದ್ಯ ಮನೆ ಊಟ ಕೊಡುವ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಜುಲೈ 18ರಂದು ಈ ಬಗ್ಗೆ ನಿರ್ಧಾರ ಆಗಲಿದೆ. ಹೊರಗೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಕೂಡ ಪತ್ನಿಯ ಬಳಿ ಕೇಳಿ ದರ್ಶನ್ ತಿಳಿದುಕೊಂಡಿದ್ದಾರೆ. ಜಾಮೀನು ಪ್ರಕ್ರಿಯೆ ಬಗ್ಗೆಯೂ ಕುಟುಂಬಸ್ಥರ ಜೊತೆಗೆ ಚರ್ಚೆ ನಡೆದಿದೆ. ಮಗನ ಕಂಡು ದರ್ಶನ್ ಖುಷಿಯಾಗಿದ್ದರು. ಮತ್ತೆ ರಾತ್ರಿಯಾಗುತ್ತಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ. ಇತರ ಜೈಲು ಸಿಬ್ಬಂದಿ ಜೊತೆ ಅವರು ಬೆರೆಯುತ್ತಿಲ್ಲ. ವರ್ಕೌಟ್ ಇಲ್ಲದೆ, ಸರಿಯಾದ ಆಹಾರ ಇಲ್ಲದೆ ಮಾನಸಿಕವಾಗಿ ಕುಗ್ಗಿದ್ದಾರೆ. ಕುಟುಂಬಸ್ಥರು ಧೈರ್ಯ ತುಂಬಿದರೂ ಚಡಪಡಿಕೆ ನಿಂತಿಲ್ಲ ಎನ್ನಲಾಗಿದೆ.